ವೋಡ್ಕಾ ಕುಡಿಯಿರಿ, ಹಾಕಿ ಆಡುತ್ತಿರಿ ಎಂದ ಅಧ್ಯಕ್ಷ: ಈ ದೇಶದಲ್ಲಿ ಕೊರೋನಾದ ಭೀತಿಯೇ ಇಲ್ಲ, ಜನಜೀವನ ಮಾಮೂಲು

0
1194

ಸನ್ಮಾರ್ಗ ವಾರ್ತೆ

ಮಾಸ್ಕೊ: ವಿಶ್ವದ ಹಲವಾರು ದೇಶಗಳು ಕೊರೊನಾ ತೆಕ್ಕೆಗೆ ಬಿದ್ದು ಏದುಸಿರಿಡುತ್ತಿದ್ದರೆ ಮಾಜಿ ಸೋವಿಯತ್ ಯೂನಿಯನ್ ನ ಭಾಗವಾಗಿದ್ದ ಬೆಲಾರಸ್‍ ಇವ್ಯಾವುದರ ಹಂಗಿಲ್ಲದೆ ಯಾವುದೇ ನಿಯಂತ್ರಣಗಳಿಲ್ಲದೆ, ಲಾಕ್‍ಡೌನ್, ಔಟ್‍ಗಳಿಲ್ಲದೆ ಎಂದಿನಂತೆ ವ್ಯಸ್ತವಾಗಿದೆ. ಈ ದೇಶ ರಷ್ಯ ಮತ್ತು ಪೊಲೆಂಡ್ ನಡುವೆ ಇದೆ. ಇದರ ಅಧ್ಯಕ್ಷ ಅಲಕ್ಸಾಂಡರ್ ಲುಕ್‍ಶೆನ್‍ಕೊ ಅವರು ಕೊರೊನಾಕೆ ಮದ್ದು ವೊಡ್ಕೊ ಕುಡಿಯಿರಿ, ಹಾಕಿ ಆಡಿರಿ ಎಂದು ಹೇಳಿಬಿಟ್ಟಿದಾರೆ. ಅಮೆರಿಕ, ಯುರೋಪ್, ಏಷ್ಯ ವೈರಸ್‍ಗೆ ತುತ್ತಾಗಿರುವ ವೇಳೆ ಬೆಲೊರಸ್ ಅಧ್ಯಕ್ಷರ ಸಲಹೆ ಕುತೂಹಲಕ್ಕೂ ಕಾರಣವಾಗಿದೆ.

ಬೆಲಾರಸ್‍ನಲ್ಲಿ 9.5 ಮಿಲಿಯನ್ ಜನರು ಇದ್ದು, ರೆಸ್ಟೊರೆಂಟ್, ಪಾರ್ಕ್ ಬಾರ್ ಗಳೆಲ್ಲವೂ ತೆರೆದುಕೊಂಡಿವೆ. ಮೈದಾನದಲ್ಲಿ ಆಟೋಟದ ಸ್ಪರ್ಧೆಗಳು ಎಂದಿನಂತೆ ನಡೆಯುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆಯ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿರ್ದೇಶವನ್ನು ಇವರು ಕಿವಿಗೆ ಹಾಕಿಕೊಂಡಿಲ್ಲ.

ನಿಯಂತ್ರಣ ಹೇರದಕ್ಕಾಗಿ ಬೆಲೊರಸ್ ಅಧ್ಯಕ್ಷರನ್ನು ಕೇಳಿದಾಗ ಅವರು ತಮಾಷೆಯ ಉತ್ತರ ನೀಡಿದರು. ಮೊಣಕಾಲಿನಲ್ಲಿ ತೆವಲುವುದಕಿಂತ ಅಂಗಾತ ಮಲಗಿ ಸಾಯುವುದು ಲೇಸು ಎಂದು ಬೆಲರೂಸ್ ಟಿವಿ ಚ್ಯಾನೆಲ್‍ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು. ಇದುವರೆಗೆ 92 ಮಂದಿಗೆ ಬೆಲಾರೂಸ್‍ನಲ್ಲಿ ಕೊರೊನಾ ದೃಢವಾಗಿದೆ. ಆದರೆ, ಇನ್ನೂ ಆ ದೇಶ ಕಠಿಣ ನಿಯಂತ್ರಣಕ್ಕೆ ಸಿದ್ಧವಾಗಿಲ್ಲ.

ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.