ಕಾಸರಗೋಡು ಮೆಡಿಕಲ್ ಕಾಲೇಜಿಗೆ ಹೆಚ್ಚಿದ ಒತ್ತಾಯ: ಕರ್ನಾಟಕ ಗಡಿಮುಚಿದ್ದನ್ನು ಸವಾಲಾಗಿ ಸ್ವೀಕರಿಸುವ ಸೂಚನೆ

0
634

ಸನ್ಮಾರ್ಗ ವಾರ್ತೆ

ಕಾಸರಗೋಡು: ಮಂಗಳೂರಿನ ಆಸ್ಪತ್ರೆಗೆ ಭೇಟಿ ನೀಡಲಾಗದಂತೆ ತಲಪಾಡಿ ಗಡಿ ಮುಚ್ಚಿದ ಕರ್ನಾಟಕ ಸರಕಾರದ ಕ್ರಮ ಕಾಸರಗೋಡು ಭಾಗದ ಜನರಲ್ಲಿ ತೀವ್ರ ಬೇಸರಕ್ಕೆ ಕಾರಣವಾಗಿದ್ದು ಕಾಸರಗೋಡು ಮೆಡಿಕಲ್ ಕಾಲೇಜು ಕೂಡಲೇ ನಿರ್ಮಾಣವಾಗಬೇಕೆಂದು ಆಗ್ರಹಗಳು ವ್ಯಕ್ತವಾಗಿದೆ.

ಕಾಸರಗೋಡಿನಲ್ಲಿ ಕೊರೊನಾ ರೋಗಿಗಳ ಹೆಚ್ಚಳದ ಹಿನ್ನೆಲೆಯಲ್ಲಿ ಮೆಡಿಕಲ್ ಕಾಲೇಜನ್ನು ಐಸೊಲೇಶನ್ ವಾಡ್ ಆಗಿ ಪರಿವರ್ತಿಸುವ ಕೇರಳ ಸರಕಾರದ ಕ್ರಮವನ್ನು ಕಾಸರಗೋಡು ಮೆಡಿಕಲ್ ಕಾಲೇಜು ಪರ ಹೋರಾಟ ಸಮಿತಿ ಶ್ಲಾಘಿಸಿದೆ. ಆದರೆ ಕಾಸರಗೋಡಿನ ಆರೋಗ್ಯ ಕ್ಷೇತ್ರದಲ್ಲಿ ಸಮಸ್ಯೆ ಎದುರಾದಾಗಲೆಲ್ಲ ಮಂಗಳೂರಿನ ಆಸ್ಪತ್ರೆಗಳನ್ನು ಆಶ್ರಯಿಸುವ ಅನಿವಾರ್ಯತೆ ಇದೆ. ಆದರೆ ಈ ಸಲ ಮಂಗಳೂರಿನ ಆಸ್ಪತ್ರೆಗಳು ಕಾಸರಗೋಡಿಗೆ ಮುಚ್ಚಿಹೋದವು. ಇದು ಪ್ರತಿಭಟನಾರ್ಹವೂ ಆಗಿದೆ. ಇದೇವೇಳೆ ಕಾಸರಗೋಡಿನ ಮೆಡಿಕಲ್ ಕಾಲೇಜನ್ನು ಬೇಗನೆ ನಿರ್ಮಿಸಿ ಜನರಿಗೆ ತೆರೆದುಕೊಡಬೇಕು. ಮೆಡಿಕಲ್ ಕಾಲೇಜಿನ ಸ್ಟೂಡೆಂಟ್ಸ್ ಹಾಸ್ಟೇಲ್, ಸ್ಟಾಫ್ ಕಾಟರ್ಸ್, ಲೈಬ್ರರಿ, ವಿದ್ಯುತ್ ಸಬ್ ಸ್ಟೇಶನ್, ಆಟದ ಮೈದಾನ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮತಿಯೂ ದೊರೆತಿದೆ.

ಆದರೆ ಇದರ ಟೆಂಡರ್ ಕಾರ್ಯ ಪೂರ್ಣವಾಗಿಲ್ಲ. ಆದರೆ ಈ ಸಲ ಕಾಸರಗೋಡಿಗರು ಎದುರಿಸಿದ ಪರಿಸ್ಥಿತಿಯನ್ನು ಹಿನ್ನೆಲೆಯಾಗಿಟ್ಟು ಮೆಡಿಕಲ್ ಕಾಲೇಜಿನ ಎಲ್ಲ ನಿರ್ಮಾಣ ಕಾಮಗಾರಿಗಳನ್ನು ಶೀಘ್ರಗತಿಯಲ್ಲಿ ಪೂರ್ತಿ ಮಾಡಬೇಕಾಗಿದೆ. ಅದರಂತೆ ಮೆಡಿಕಲ್ ಕಾಲೇಜಿಗೆ ಅಗತ್ಯ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ ಎಂದು ಕಾಸರಗೋಡು ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಕೇರಳ ಮುಖ್ಯಮಂತ್ರಿಯನ್ನು ಆಗ್ರಹಿಸಿದೆ.

ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.