ಕೊರಾನಕ್ಕೆ ಮಲೇರಿಯ ಮದ್ದು ಕುಡಿದ ವೈದ್ಯರ ಸಾವು

0
766

ಸನ್ಮಾರ್ಗ ವಾರ್ತೆ

ಗುವಾಹಟಿ: ಕೊರೊನಾಕ್ಕೆ ಮಲೇರಿಯದ ಮದ್ದು ಕುಡಿದು ವೈದ್ಯರೊಬ್ಬರು ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಆದರೆ ಸಾವಿನ ಕಾರಣ ಏನೆಂದು ಈವರೆಗೂ ಖಚಿತವಾಗಿ ತಿಳಿಸಲಾಗಿಲ್ಲ. ಅವರು ಮಲೇರಿಯ ಮದ್ದು ಕುಡಿದ ಬಳಿಕ ಅಸ್ವಸ್ಥರಾದರು. ಇದನ್ನು ಅವರು ತನ್ನ ಸಹೋದ್ಯೋಗಿಗೆ ವಾಟ್ಸಪ್ ಮೂಲಕ ತಿಳಿಸಿದ್ದರು. ಅಸ್ಸಾಮಿನ ಖಾಸಗಿ ಆಸ್ಪತ್ರೆಯ ವೈದ್ಯ ಉತ್ಪಲ್‍ಜಿತ್ ಬರ್ಮನ್ (44) ಮೃತಪಟ್ಟ ವ್ಯಕ್ತಿ. ಮಲೇರಿಯದ ಮದ್ದು ಉಪಯೋಗಿಸುವ ಹೈಡ್ರೊ ಕ್ಷಿಕ್ಲೊರಕ್ವಿನ್ ಅನ್ನು ಕೊರೊನಾ ಚಿಕಿತ್ಸೆಗೂ ಉಪಯೋಗಿಸಲಾಗುತ್ತದೆ. ಇದನ್ನು ಆರೋಗ್ಯ ಕಾರ್ಯಕರ್ತರು ಮುಂಚಿತವಾಗಿ ಸೇವಿಸಬಹುದು ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ತಿಳಿಸಿತ್ತು. ಇದೇ ಮದ್ದನ್ನು ಡಾ. ಉತ್ಪಲ್‍ಜಿತ್ ಕುಡಿದಿದ್ದರು.

ಇದೇವೇಳೆ, ಅಸ್ಸಾಮಿನಲ್ಲಿ ಯಾರಿಗೂ ಕೊರೊನ ದೃಢಪಟ್ಟಿಲ್ಲ. ಆದರೆ ರೋಗದ ವಿರುದ್ಧ ಮುನ್ನೆಚ್ಚರಿಕೆಯಾಗಿ ಅನಸ್ತಟಿಸ್ಟ್ ಆಗಿರುವ ಡಾ. ಉತ್ಪಲ್‍ಜಿತ್ ಸ್ವಯಂ ನಿರ್ಧಾರದಲ್ಲಿ ಮಲೇರಿಯ ಮದ್ದು ಕುಡಿದಿದ್ದರು.

ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.