ಹಾಡು ಹಾಡಿ ಜನರನ್ನು ಮನೆಯಲ್ಲಿ ಕೂರಿಸಿದ ಛತ್ತೀಸ್‍ಗಡ ಪೊಲೀಸಧಿಕಾರಿ: ಏಕ್ ಪ್ಯಾರ್ ಕಾ ನಗ್ಮಾ ಹೇ

0
544

ಸನ್ಮಾರ್ಗ ವಾರ್ತೆ

ಬಿಲಾಸ್‍ಪುರ: ಕೊರೊನಾ ಜಾಗೃತಿಯ ಭಾಗವಾಗಿ ಪೊಲೀಸ್ ಅಧಿಕಾರಿಯೊಬ್ಬರು ಹಾಡಿದ ರಿಮಿಕ್ಸ್ ಹಾಡು ವೈರಲ್ ಆಗಿದೆ. ರಸ್ತೆ ಕಾರ್ನರ್ ಗಳಲ್ಲಿ ಸುತ್ತಾಡಿ ನಡೆಯುವವರನ್ನು ಮನೆಯಲ್ಲಿ ಕೂರಿಸಲು ಲಾಠಿಚಾರ್ಜು ಸಹಿತ ಹಲವು ಉಪಾಯಗಳನ್ನು ಪೊಲೀಸರು ಜಾರಿಗೆ ತಂದರೆ, ಛತ್ತೀಸ್‍ಗಡದ ಪೊಲೀಸ್‍ನ ಅಭಿನವ್ ಉಪಾಧ್ಯಾಯ ಹಾಡುಗಳೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಶೋರ್ ಎಂಬ ಬಾಲಿವುಡ್ ಸಿನೆಮಾ ಏಕ್ ಪ್ಯಾರ್ ನಗ್ಮಾಹೇ ಎಂಬ ಹಾಡಿನ ಧಾಟಿಯಲ್ಲಿ ಕೊರೊನಾ ಹಾಡು ರಚಿಸಿ ಬಿಲಾಸಪುರದ ಜನವಾಸದ ಪ್ರದೇಶದಲ್ಲಿ ಮೈಕ್ ಮೂಲಕ ಇವರು ಹಾಡುತ್ತಿದಾರೆ.

ನಾವು ಮನೆಯಲ್ಲೇ ಇರಬೇಕು. ಹೊರಗೆ ಹೋಗಬಾರದು. ನಾವು ಸ್ವಯಂ ಸಂರಕ್ಷಿಸಿಕೊಳ್ಳಬೇಕು. ಜೊತೆಗ ಇತರರನ್ನು..ನಾವು ಸ್ಯಾನೈಟಸರ್ ಉಪಯೋಗಿಸಿ ಕೈತೊಳೆಯಬೇಕು. ನಾವು ಕೊರೊನಾ ವೈರಸ್ ಪ್ರತಿರೋಧಿಸಬೇಕೆಂದು ಅವರು ಹಾಡಿನ ಮೂಲಕ ಕರೆನೀಡುತ್ತಿದ್ದಾರೆ. ಜನರು ಮನೆಯ ಬಾಲ್ಕನಿಯಲ್ಲಿ ನಿಂತು ಹಾಡುಗಳನ್ನು ಕೇಳಿಸುತ್ತಿದ್ದಾರೆ. ಪೊಲೀಸಧಿಕಾರಿಯನ್ನು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಿದ್ದಾರೆ. ಜೊತೆಗೆ ಈ ಹಾಡು ಸಾಮಾಜಿಕ ,ಮಾಧ್ಯಮಗಳಲ್ಲಿಯೂ ವೈರಲ್ ಆಗಿದೆ. ಛತ್ತೀಸ್‍ಗಡದಲ್ಲಿ ಏಳು ಮಂದಿಗೆ ಕೊರೊನಾ ದೃಢಪಟ್ಟಿದೆ. ಸೌದಿ ಅರೇಬಿಯದಿಂದ ಬಿಲಾಸ್ ಪುರಕ್ಕೆ ಬಂದ ಮಹಿಳೆಯೊಬ್ಬರಲ್ಲಿ ಮೊದಲಿಗೆ ವೈರಸ್ ಕಂಡು ಬಂದಿತ್ತು.

ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.