ಸನ್ಮಾರ್ಗ ವಾರ್ತೆ
ಮಸ್ಕತ್: ಒಮನ್ನಲ್ಲಿ 12 ಮಂದಿಗೆ ಹೊಸದಾಗಿ ಸೋಮವಾರ ಕೊರನಾ ದೃಢಪಟ್ಟಿದೆ. ಜೊತೆಗೆ ಕೊರೊನಾ ಇರುವವರ ಸಂಖ್ಯೆ 179ಕ್ಕೇರಿದ್ದು ಇವರಲ್ಲಿ 29 ಮಂದಿ ಗುಣಮುಖರಾಗಿದ್ದಾರೆ. ವಿವಿಧ ಗವರ್ನರೇಟ್ಗಳಲ್ಲಿ 150 ಮಂದಿ ಈಗ ಕೊರೊನಾದಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಮಸ್ಕತ್ನಲ್ಲಿ ರೋಗ ಕಂಡು ಬಂದವರ ಸಂಖ್ಯೆ 126 ಆಗಿದೆ. ಇವರಲ್ಲಿ ಹದಿನೆಂಟು ಮಂದಿ ರೋಗಮುಕ್ತರಾದರು. ಉತ್ತರ ಬಾತಿನದಲ್ಲಿ 17 ಮಂದಿಗೆ ಮತ್ತು ದಾಖಿಲದಲ್ಲಿ 17 ಮಂದಿಗೆ ಕೊರೊನಾ ದೃಢಪಟ್ಟಿದೆ.
ಇವರಲ್ಲಿ ಬಾತಿನದಳ್ಳಿ ಮೂರು ಮಂದಿ ಗುಣಮುಖರಾದರು. ದಾಖಿಲದಲ್ಲಿ ಏಳು ಮಂದಿ ಕೊರೊನ ಮುಕ್ತರಾದರು. ದೋಫರಿನಲ್ಲಿ ಏಳುಮಂದಿ, ದಾಹಿರದಲ್ಲಿ ಇಬ್ಬರು, ಬುರೈಮಿಯಲ್ಲಿ ಒಬ್ಬ ಕೊರೊನಾ ಪೀಡಿತನಾಗಿದ್ದು ದಕ್ಷಿಣ ಶರ್ಕಿಯಲ್ಲಿ ಕೊರೊನಾದಿಂದ ಒಬ್ಬ ಗುಣಮುಖನಾಗಿದ್ದಾನೆ. 23 ಮಂದಿ ಕೊರೊನಾ ಪೀಡಿತರಾಗಿ ಆಸ್ಪತ್ರೆ ಐಸೊಲೇಶನಲ್ಲಿದ್ದಾರೆ ಎಂದು ಟಿವಿ ಸಂದರ್ಶನದಲ್ಲಿ ಆರೋಗ್ಯ ಮಂತ್ರಿ ಹೇಳಿದ್ದರು. ಇದುವರೆಗೆ ಇಲ್ಲಿ ಸಾವಿನ ಕುರಿತು ವರದಿಯಾಗಿಲ್ಲ. ಉಳಿದವರಿಗೆ ಮನೆ, ಹೊಟೇಲುಗಳಲ್ಲಿ ಐಸೊಲೇಶನ್ ವ್ಯವಸ್ಥೆ ಕಲ್ಪಿಸಲಾಗಿದೆ. ಒಮನ್ನಲ್ಲಿ ರೋಗಿಗಳು 16ರಿಂದ 59 ವರ್ಷ ವಯೊಮಾನದವರೇ ಹೆಚ್ಚು ಕೊರೊನಾ ಪೀಡಿತರಾಗಿದಾರೆ.
ಈಗ 12,642 ಮಂದಿಯನ್ನು ಮನೆಯಲ್ಲಿ ಸಂಪರ್ಕ ನಿಷೇಧಿಸಿ ಇರಿಸಲಾಗಿದೆ. 1713 ಮಂದಿ ಬೇರೆ ಬೇರೆ ಆಸ್ಪತ್ರೆಗಳಲ್ಲಿದ್ದಾರೆ. ಮುಂಬರುವ ದಿನಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವರು ಹೇಳಿದರು. ರೋಗ ಹರಡುವ ಮುನ್ನೆಚ್ಚರಿಕೆ ವಹಿಸಿ ಜನವರಿಯಿಂದಲೇ ಸಿದ್ಧತೆಯನ್ನು ಮಾಡಿಕೊಳ್ಳಲಾಗಿತ್ತು. ಆದ್ದರಿಂದ ರೋಗವನ್ನು ಇಷ್ಟಕ್ಕೆ ನಿಯಂತ್ರಿಸಿಡಲು ಸಾಧ್ಯವಾಗಿದ್ದು, ಇಲ್ಲದಿದ್ದರೆ ರೋಗಿಗಳ ಸಂಖ್ಯೆ 20,000ವನ್ನು ದಾಟಬಹುದಾಗಿತ್ತು ಎಂದು ಸಚಿವರು ಹೇಳಿದರು.
ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












