ಸನ್ಮಾರ್ಗ ವಾರ್ತೆ
ಕೊಚ್ಚಿ: ಕಾಸರಗೋಡು ಗಡಿಯಲ್ಲಿ ರಸ್ತೆ ತೆರೆದು ಕೊಡುವುದಿಲ್ಲ ಎಂದು ಕರ್ನಾಟಕ ಸರಕಾರ ಕೇರಳ ಹೈಕೋರ್ಟಿನಲ್ಲಿ ತನ್ನ ನಿಲುವು ವ್ಯಕ್ತಪಡಿಸಿದೆ. ವಯನಾಡ್, ಕಣ್ಣೂರ್ ಗಡಿ ರಸ್ತೆಗಳನ್ನು ತೆರೆಯುವುದಿಲ್ಲ ಎಂದು ಕರ್ನಾಟಕ ತಿಳಿಸಿದೆ. ಇದೇ ವೇಳೆ ರೋಗಿಗಳನ್ನು ತಡೆಯಬಾರದೆಂದು ಹೈಕೋರ್ಟು ಕರ್ನಾಟಕ ಸರಕಾರಕ್ಕೆ ಸೂಚಿಸಿತು. ಮಾನವ ಹಕ್ಕುಗಳನ್ನು ಉಲ್ಲಂಘಿಸುವುದಕ್ಕೆ ಯಾವ ರಾಜ್ಯವನ್ನೂ ಬಿಡಲಾಗದು ಎಂದು ಕೋರ್ಟು ಎಚ್ಚರಿಸಿತು.
ಕಾಸರಗೋಡು ಗಡಿಯ ರಸ್ತೆಗಳು ತೆರೆಯುವ ಬಗ್ಗೆ ಕೇಂದ್ರ ರಾಜ್ಯ ಸರಕಾರಗಳು ಕೋರ್ಟಿನಲ್ಲಿ ನಿಲುವು ವ್ಯಕ್ತಪಡಿಸಿವೆ. ಇರುಟ್ಟಿ, ಕೊಡಗು, ವಿರಾಜಪೇಟೆ ರಸ್ತೆ ತೆರೆಯಬೇಕೆಂದು ಕೇರಳವು ಕೋರ್ಟಿನಲ್ಲಿ ಆಗ್ರಹಿಸಿತು. ಬುಧವಾರ ಹೇಳುತ್ತೇವೆ ಎಂದು ಕೋರ್ಟಿಗೆ ಕರ್ನಾಟಕ ಸರಕಾರ ತಿಳಿಸಿದೆ.
ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












