ಸನ್ಮಾರ್ಗ ವಾರ್ತೆ
ಕೇರಳ, ಎ. 1: ಸರಕು ಲಾರಿಯಲ್ಲಿ ಅಡಗಿ ಕೂತಿದ್ದ ಯುವಕ ಶ್ರೀಜಿತ್ ಎಂಬಾತನನ್ನು ಲಕ್ಕಿಡಿಯಲ್ಲಿ ವಾಹನ ತಪಾಸಣೆಯ ವೇಳೆ ಬಂಧಿಸಲಾಗಿದೆ. ಸರಕು ವಾಹನವನ್ನು ತಪಾಸಣೆ ಮಾಡುವ ಗೇಟ್ನಲ್ಲಿ ಯುವಕ ಸಿಕ್ಕಿಬಿದ್ದಿದ್ದಾನೆ. ಈತ ಕೋಝಿಕ್ಕೋಡಿನವನಾಗಿದ್ದು ಮಂಗಳವಾರ ಮೈಸೂರಿನಿಂದ ಲಾರಿ ಕೋಝಿಕ್ಕೋಡಿಗೆ ಹೊರಟಿತ್ತು. ಚಾಲಕನಿಗೆ ಗೊತ್ತಾಗದಂತೆ ಯುವಕ ಸರಕುಗಳ ನಡುವೆ ಬಚ್ಚಿಟ್ಟುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಲಕ್ಕಿಡಿಯ ಮೊದಲು ಮುತ್ತಂಙ ಎಂಬಲ್ಲಿ ಸರಕು ಲಾರಿಯನ್ನು ತಪಾಸಣೆ ಮಾಡಲಾಗಿತ್ತು. ಆಗ ಇವನು ಲಾರಿಯೊಳಗಿದ್ದುದು ಗೊತ್ತಾಗಿರಲಿಲ್ಲ. ಲಕ್ಕಿಡಿಯಲ್ಲಿ ಪುನಃ ತಪಾಸಣಾ ಗೇಟಿನ ಬಳಿ ನಿಲ್ಲಿಸಿದಾಗ ಈತ ಲಾರಿಯಿಂದ ಕೆಳಗಿಳಿದಿದ್ದ. ಯುವಕನಿಗೆ ಯಾವ ಸ್ಥಳಕ್ಕೆ ತಲುಪಿದ್ದೆಂದು ಗೊತ್ತಾಗಿರಲಿಲ್ಲ. ರಸ್ತೆಬದಿ ಸಂದೇಹಾಸ್ಪದವಾಗಿ ನಿಂತಿದ್ದನ್ನು ನೋಡಿ ಅಧಿಕಾರಿಗಳು ಪ್ರಶ್ನಿಸಿದಾಗ ಲಾರಿಯೊಳಗೆ ಅಡಗಿಕೊಂಡು ಬಂದದ್ದು ಬಯಲಾಗಿತ್ತು. ಈತ ಮೈಸೂರಿನ ಮಾರ್ಕೆಟಿನಲ್ಲಿ ದುಡಿಯತ್ತಿದ್ದ. ಲಾಕ್ಡೌನಿನಿಂದಾಗಿ ಊರಿಗೆ ಬರಲು ಆಗಿರಲಿಲ್ಲ. ನಂತರ ಯುವಕನನ್ನು ಕೊರಂಟೈನ್ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ. ಈತನ ವಿರುದ್ಧ ಈ ಹಿಂದೆ ಪಂದೀರಿಂಗಾವ್ ಠಾಣೆಯಲ್ಲಿ ಬೈಕ್ಗೆ ಬೆಂಕಿ ಹಚ್ಚಿರುವ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












