ಲಾಕ್‍ಡೌನ್‍ ನಲ್ಲಿ ಆನ್‍ಲೈನ್ ವ್ಯಾಪಾರ ಅಗತ್ಯ ವಸ್ತುಗಳಿಗೆ ಮಾತ್ರ: ಸರಕಾರ

0
472

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಎ.19: ಲಾಕ್‍ಡೌನ್‍ ನ ಸಮಯದಲ್ಲಿ ಅಗತ್ಯ ವಸ್ತುಗಳಿಗೆ ಮಾತ್ರ ಇ-ಕಾಮರ್ಸ್ ವೆಬ್‍ಸೈಟ್‍ಗಳ ಮೂಲಕ ವ್ಯಾಪಾರ ವ್ಯವಹಾರ ಮಾಡಬಹುದು ಎಂದು ಕೇಂದ್ರ ಸರಕಾರ ಹೇಳಿದೆ. ಗೃಹಸಚಿವಾಲಯ ಇದಕ್ಕೆ ಸಂಬಂಧ ಪಟ್ಟ ಆದೇಶ ಹೊರಡಿಸಿದೆ. ಎಪ್ರಿಲ್ 20ರಿಂದ ದೇಶದಲ್ಲಿ ಲಾಕ್‍ಡೌನ್‍ನಲ್ಲಿ ಸಡಿಲಿಕೆ ಆಗಲಿದ್ದು ಆನ್‍ಲೈನ್ ವ್ಯಾಪಾರಕ್ಕೆ ಕೇಂದ್ರ ಸರಕಾರ ವಿನಾಯತಿ ಪ್ರಕಟಿಸಿತ್ತು. ಈ ವಿನಾಯಿತಿಯ ಮರುಪರಿಶೀಲನೆ ನಡೆಸಲಾಗುತ್ತಿದೆ. ಮೊದಲು ಆನ್‍ಲೈನ್ ಶಾಪಿಂಗ್ ವೆಬ್‍ಸೈಟ್ ಮೂಲಕ ಮೊಬೈಲ್ ಫೋನ್, ಟೆಲಿವಿಷನ್, ರೆಫ್ರಿಜರೇಟರ್, ಲ್ಯಾಪ್‍ಟಾಪ್, ಬಟ್ಟೆಬರೆಗಳು ಸ್ಟೇಶನರಿ, ಶಾಲಾ ಮಕ್ಕಳ ವಸ್ತುಗಳನ್ನು ಮಾರಬಹುದು ಎಂದು ಗೃಹ ಸಚಿವಾಲಯ ಪ್ರಕಟಣೆ ನೀಡಿತ್ತು.

ಎಪ್ರಿಲ್ 20ರಿಂದ ಆರೋಗ್ಯ ಕ್ಷೇತ್ರ, ಕೃಷಿ ಕ್ಷೇತ್ರ, ಮೀನುಗಾರಿಕೆ, ತೋಟ ಕಾರ್ಯಗಳಿಗೆ ಕೇಂದ್ರಸರಕಾರ ವಿನಾಯಿತಿ ನೀಡಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.