ವಿಮಾನ- ರೈಲು ಮೇ.3ರ ನಂತರವೂ ಆರಂಭವಾಗುವುದು ಸಂಶಯ

0
529

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ನ. 19: ದೇಶದಲ್ಲಿ 40 ದಿವಸಗಳ ಲಾಕ್ ಡೌನ್ ಮೇ ಮೂರಕ್ಕೆ ಮುಕ್ತಾಯವಾಗುತ್ತಿದ್ದು ರೈಲು, ವಿಮಾನ ಸಂಚಾರ ಪುನರಾರಂಭವಾಗುವುದು ಸಂಶಯ ಎಂದು ವರದಿಯಾಗಿದೆ. ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಸಚಿವರ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದೆ.

ಮೇ.15 ರಿಂದ ವಿಮಾನ ಯಾನ ಆರಂಭಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿದರೂ ಇನ್ನೂ ಅಂತಿಮವಾಗಿಲ್ಲ ಎಂದು ಹರ್ದಿಪ್ ಪುರಿ ತಿಳಿಸಿದ್ದಾರೆ. ಇದರ ಬಗ್ಗೆ ಅಂತಿಮ ನಿರ್ಧಾರ ಪ್ರಧಾನಿ ಪ್ರಕಟಿಸಲಿದ್ದಾರೆ. ಈ ಹಿಂದೆ ಮೇ ನಾಲ್ಕರಿಂದ ದೇಶೀಯ ವಿಮಾನ ಮತ್ತು ಜೂನ್ ಒಂದರಿಂದ ಅಂತಾರಾಷ್ಟ್ರೀಯ ವಿಮಾನಗಳ ಬುಕ್ಕಿಂಗ್ ಅನ್ನು ಏರ್ ಇಂಡಿಯ ಆರಂಭಿಸಿತ್ತು. ಇದರ ಬೆನ್ನಿಗೆ ಕೇಂದ್ರ ಸರಕಾರದ ಆದೇಶ ಬಂದ ಬಳಿಕವೇ ಬುಕ್ಕಿಂಗ್ ಶುರು ಮಾಡಬೇಕೆಂದು ವಿಮಾನಯಾನ ಸಚಿವಾಲಯ ಸೂಚನೆ ನೀಡಿತ್ತು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.