ಅಹ್ಮದಬಾದ್: ಆರೋಗ್ಯ ವಸ್ತುಗಳ ಉತ್ಪಾದನಾ ಫ್ಯಾಕ್ಟಿರಿಗೆ ಬೆಂಕಿ

0
481

ಸನ್ಮಾರ್ಗ ವಾರ್ತೆ

ಅಹ್ಮದಬಾದ್, ಜೂ.24: ಗುಜರಾತಿನ ಅಹ್ಮದಬಾದಿನಲ್ಲಿ ಫ್ಯಾಕ್ಟರಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ಸಾನಂದ್ ಕೈಗಾರಿಕಾ ವಲಯದಲ್ಲಿ ಬುಧವಾರ ಬೆಳಗ್ಗೆ ಬೆಂಕಿ ದುರಂತ ನಡೆದಿದೆ. ಶುಚೀಕರಣ, ಆರೋಗ್ಯ ವಸ್ತುಗಳನ್ನು ನಿರ್ಮಿಸುವ ಕಾರ್ಖಾನೆ ಇದು.

ಗುಜರಾತ್ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಕಾರ್ಪೊರೇಷನ್‍ನ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಫ್ಯಾಕ್ಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. 31 ಅಗ್ನಿಶಾಮಕ ವಾಹನಗಳು 125 ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸುವ ಕೆಲಸ ಮಾಡಿದ್ದಾರೆ. ಒಂಬತ್ತು ವಾಟರ್ ಟ್ಯಾಂಕುಗಳು. ಹನ್ನೊಂದು ವಾಟರ್ ಬ್ರೌಸರ್‍ಗಳು ಒಂದು ಸ್ಮೋಕ್ ಎಕ್ಸಾಸ್ಟರ್‌ಗಳನ್ನು ಬೆಂಕಿ ಆರಿಸಲು ಬಳಸಿಕೊಳ್ಳಲಾಗಿದೆ. ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ‌.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.