ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಜೂ.25: ಏಳು ದಿವಸಗಳೊಳಗೆ ಕೊರೋನ ಗುಣಪಡಿಸುವ ಔಷಧ ಕಂಡು ಹಿಡಿದಿದ್ದೇವೆ ಎಂಬ ವಾದದೊಂದಿಗೆ ಹಾಜರಾದ ಬಾಬಾ ರಾಮ್ ದೇವ್ರ ಪತಂಜಲಿಗೆ ಮದ್ದಿನ ಎಲ್ಲ ವಿವರಗಳನ್ನು ನೀಡಿ ಮತ್ತು ಜಾಹೀರಾತು ಕೊಡಬೇಡಿ ಎಂದು ಆಯುಷ್ ಸಚಿವಾಲಯ ತಿಳಿಸಿದೆ. ಮದ್ದು ಪರಿಶೀಲಿಸಿದ ಬಳಿಕ ಅದರ ಫಲಿತಾಂಶ ಸಿಗುವವರೆಗೆ ಉತ್ಪನ್ನದ ಜಾಹೀರಾತನ್ನು ಪತಂಜಲಿ ನೀಡುವಂತಿಲ್ಲ ಎಂದು ಸಚಿವಾಲಯ ತಿಳಿಸಿದೆ.
ಕೊರೊನಿಲ್, ಸ್ವಾಸರಿ ಎಂಬ ಮದ್ದು ರೋಗಿಗಳ ರೋಗಪ್ರತಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ. ಕೊರೋನದಿಂದ ಸಂಪೂರ್ಣ ಗುಣಮುಖರಾಗಬಹುದು ಎಂದು ಬಾಬಾ ರಾಮ್ ದೇವ್ ಹೇಳಿದ್ದಾರೆ. ಕೊರೋನ ಪೀಡಿತರಿಗೆ ನಮ್ಮ ಮದ್ದು ಕೊಡಲಾಗಿದ್ದು ಶೇ.100ರಷ್ಟು ಗುಣಮುಖರಾಗಿದ್ದಾರೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಆದರೆ, ಪತಂಜಲಿ ವಾದದ ಸತ್ಯವಾಗಲಿ ಮದ್ದಿನ ವೈಜ್ಞಾನಿಕ ಅಧ್ಯಯನದ ವಿವರಗಳಾಗಲಿ ಗೊತ್ತಿಲ್ಲ ಎಂದು ಸಚಿವಾಲಯ ತಿಳಿಸಿದೆ. ಯಾವ ಆಸ್ಪತ್ರೆಗಳಲ್ಲಿ ಮದ್ದಿಗೆ ಸಂಬಂಧಿಸಿದ ಸಂಶೋಧನೆ ನಡೆದಿದೆ ಮತ್ತು ಇನ್ಸ್ಟಿಟ್ಯೂಷನಲ್ ಎಥಿಕ್ಸ್ ಕಮಿಟಿ ಕ್ಲಿಯರನ್ಸ್ನ್ನು ಪತಂಜಲಿ ಪಡೆದಿದಿಯೇ ಎಂಬುದನ್ನು ಸಚಿವಾಲಯ ಪ್ರಶ್ನಸಿದೆ.
ಪತಂಜಲಿ ಸಂಶೋಧನಾ ಕೇಂದ್ರ ಮದ್ದನ್ನು ಅಭಿವೃದ್ಧಿ ಪಡಿಸಿದೆ. 30 ದಿವಸಗಳ ಕಿಟ್ಗೆ 545 ರೂಪಾಯಿ ಬೆಲೆ. ದಿವ್ಯ ಕೊರೋನ ಕಿಟ್ ಉಪಯೋಗಿಸಿದರೆ ಮೂರರಿಂದ ಏಳು ದಿವಸಗಳಲ್ಲಿ ಕೊರೋನದಿಂದ ಗುಣಮುಖರಾಗಬಹುದು ಎಂದು ಪತಂಜಲಿ ಹೇಳುತ್ತಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












