ಸನ್ಮಾರ್ಗ ವಾರ್ತೆ
ಮಂಗಳೂರು,ಜು.6: ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಎಡ್ ಪರೀಕ್ಷಾ ಫಲಿತಾಂಶವು ಗುರುವಾರ ಪ್ರಕಟವಾಗಿದ್ದು, ಚೊಕ್ಕಬೆಟ್ಟುವಿನ ಅಶ್ರೀನಾ ಇಬ್ರಾಹಿಮ್ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಯಾಗಿದ್ದು, 80.20% ಅಂಕಗಳನ್ನು ಪಡೆದಿದ್ದಾರೆ. ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಸರಕಾರಿ ಶಿಕ್ಷಕ-ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದಾರೆ.
ಅಶ್ರೀನಾರವರು ನಿವೃತ್ತ ಎನ್.ಎಂ.ಏ.ಟಿ ಉದ್ಯೋಗಿ ಇಬ್ರಾಹಿಮ್ ಚೊಕ್ಕಬೆಟ್ಟು ಹಾಗೂ ಮೈಮೂನ ದಂಪತಿಗಳ ಪುತ್ರಿಯಾಗಿದ್ದು, ಪ್ರಸ್ತುತ ಶಾರ್ಜಾದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಮಾಅತೆ ಇಸ್ಲಾಮೀ ಹಿಂದ್ನ ಕಾರ್ಯಕರ್ತ ಮುಹಮ್ಮದ್ ನಿಸಾರ್ ಫರಂಗಿಪೇಟೆ ಇವರ ಪತ್ನಿಯಾಗಿದ್ದಾರೆ. ಅಶ್ರೀನಾ, ಶಿಕ್ಷಣ ಕ್ಷೇತ್ರದಲ್ಲಿ ಸಂಶೋಧನೆ ನಡೆಸುವ ಆಸಕ್ತಿ ಹೊಂದಿದ್ದು, ಕರ್ನಾಟಕ ಎಜುಕೇಶನ್ ಸರ್ವೀಸ್(KES)ಗೆ ತಯಾಗಿ ನಡೆಸುತ್ತಿದ್ದಾರೆ. ಪದವಿ ಶಿಕ್ಷಣವನ್ನು ಗೋವಿಂದ ದಾಸ ಕಾಲೇಜು ಸುರತ್ಕಲ್ನಲ್ಲಿ ಪಡೆದಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












