ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಜು.9: ಬಕ್ರೀದ್ ದಿನ ನಮಾಝ್, ಬಲಿ ನಿರ್ವಹಿಸುವವರು ಸರಿಯಾದ ಕೊರೋನ ಮಾನದಂಡ ಪಾಲಿಸಬೇಕೆಂದು ಜಮಾಅತೆ ಇಸ್ಲಾಮೀ ಹಿಂದ್ ಶರೀಯಾ ಕೌನ್ಸಿಲ್ ಕರೆ ನೀಡಿದೆ.
ಹಬ್ಬದ ದಿನದಲ್ಲಿ ನಮಾಝ್ ಮತ್ತು ಪ್ರವಾದಿ ಇಬ್ರಾಹೀಮರ ಸ್ಮರಣೆಯಲ್ಲಿ ಬಲಿದಾನ ನೀಡಲಾಗುತ್ತದೆ. ಇದು ಪ್ರಧಾನ ಕಾರ್ಯಗಳೂ ಆಗಿವೆ. ಇದನ್ನು ಸಾರ್ವಜನಿಕವಾಗಿ ರಸ್ತೆ ಬದಿಗಳಲ್ಲಿ ನಿರ್ವಹಿಸಬಾರದು ಮತ್ತು ಶುಚಿತ್ವವವನ್ನು ಕಾಪಾಡಬೇಕೆಂದು ಅದು ಆಗ್ರಹಿಸಿದೆ.
ವಿಷಯಗಳ ಮೇಲ್ನೋಟಕ್ಕೆ ವಿಶೇಷ ಸಮಿತಿ ರಚಿಸಬೇಕು. ಸ್ಥಳೀಯ ಆಡಳಿತದೊಂದಿಗೆ ಸಹಕರಿಸಿ ಕ್ರಮಗಳನ್ನು ನೆರವೇರಿಸಬೇಕಾಗಿದೆ. ಮಸೀದಿಯಲ್ಲಿ ನಮಾಝನ್ನು ಕೊರೋನ ಮಾನದಂಡ ಪಾಲಿಸಿ ನಿರ್ವಹಿಸಬೇಕಾಗಿದೆ.
ಆರಾಧನಾ ಕರ್ಮಗಳನ್ನು ನಿರ್ವಹಿಸಲು ರಾಜ್ಯ, ಕೇಂದ್ರ ಸರಕಾರಗಳು ಅಗತ್ಯ ಅನುಕೂಲವನ್ನು ಮಾಡಿಕೊಡಬೇಕೆಂದು ಶರೀಯಾ ಕೌನ್ಸಿಲ್ ಆಗ್ರಹಿಸಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












