ಸನ್ಮಾರ್ಗ ವಾರ್ತೆ
ಚೀನಾದಲ್ಲಿ ಮತ್ತೊಂದು ವೈರಸ್ ಸೋಂಕು ಹರಡುತ್ತಿದೆ. ಇದರ ಹೆಸರು ಎಸ್ಎಫ್ಟಿಎಸ್ ವೈರಸ್. ಇದನ್ನು ‘ಬುನ್ಯಾ ವೈರಸ್’ ಎಂದೂ ಕರೆಯುತ್ತಾರೆ. ಜೇಡ ತರಹದ ಪ್ರಾಣಿಯ ಕಚ್ಚುವಿಕೆಯಿಂದ ರೋಗವು ಹರಡುತ್ತಿದೆ. ಚೀನಾದಲ್ಲಿ ಈವರೆಗೆ 60 ಜನರು ವೈರಸ್ ಸೋಂಕಿಗೆ ಒಳಗಾಗಿದ್ದು, 7 ಮಂದಿ ಸಾವನ್ನಪ್ಪಿದ್ದಾರೆ.
ಚೀನಾದ ಮಾಧ್ಯಮಗಳ ಪ್ರಕಾರ, ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತ್ಯದ 37 ಜನರು ಕಳೆದ 6 ತಿಂಗಳಲ್ಲಿ ಎಸ್ಎಫ್ಟಿಎಸ್ ವೈರಸ್ಗೆ ತುತ್ತಾಗಿದ್ದಾರೆ. ತರುವಾಯ ಪೂರ್ವ ಚೀನಾದ ಅನ್ಹುಯಿ ಪ್ರಾಂತ್ಯದಲ್ಲಿ 23 ಜನರು ಸೋಂಕಿಗೆ ಒಳಗಾಗಿದ್ದಾಗಿ ವರದಿಯಾಗಿದೆ.
ವೈರಸ್ ಸೋಂಕು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡಬಹುದು ಎಂದು ಹೆಜಿಯಾಂಗ್ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಡಾ. ಶೆಂಗ್ ಜಿಫಾಂಗ್ ಹೇಳುತ್ತಾರೆ. ಸೋಂಕಿತ ರೋಗಿಯ ರಕ್ತ ಮತ್ತು ಬೆವರಿನಿಂದ ಎಸ್ಎಫ್ಟಿಎಸ್ ವೈರಸ್ ಹರಡುವುದಾಗಿ ಊಹಿಸಲಾಗಿದೆ. ಈ ಕುರಿತು ಚಿಂತಿಸಬೇಕಾದ ಅಗತ್ಯವಿಲ್ಲ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಜ್ಞರು ಹೇಳುತ್ತಾರೆ.
ಚೀನಾದ ಮಾಧ್ಯಮಗಳ ಪ್ರಕಾರ, ಎಸ್ಎಫ್ಟಿಎಸ್ ವೈರಸ್ ಹೊಸದಲ್ಲ. 2011 ರಲ್ಲಿ, ವಿಜ್ಞಾನಿಗಳು ಈ ವೈರಸ್ ಅನ್ನು ಪ್ರತ್ಯೇಕಿಸಿದ್ದು, ಎಸ್ಎಫ್ಟಿಎಸ್ನ್ನು ಬುನ್ಯಾ ವೈರಸ್ ವರ್ಗಕ್ಕೆ ಸೇರಿಸಿದ್ದಾಗಿ ವರದಿಯಾಗಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












