ಸನ್ಮಾರ್ಗ ವಾರ್ತೆ
ನವದೆಹಲಿ,ಸೆ.10: ದ್ವೇಷಾಪರಾಧದ ಘಟನೆಯೊಂದರಲ್ಲಿ, ಆಗಸ್ಟ್ 24ರ ಮಧ್ಯಾಹ್ನ ಹರಿಯಾಣದ ಪಾಣಿಪತ್ ಪಟ್ಟಣದಲ್ಲಿ ಇಖ್ಲಾಕ್ ಎಂದು ಗುರುತಿಸಲ್ಪಟ್ಟ 23 ವರ್ಷದ ಮುಸ್ಲಿಂ ಯುವಕನ ಬಲಗೈಯನ್ನು ಗುಂಪೊಂದು ಕತ್ತರಿಸಿದ್ದಾರೆಂದು ಆರೋಪಿಸಲಾದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.
ಕುಟುಂಬ ಸದಸ್ಯರು ಸೆಪ್ಟೆಂಬರ್ 7ರಂದು ಎಫ್ಐಆರ್ ದಾಖಲಿಸಿದ ನಂತರ ಈ ಘಟನೆ ಪೊಲೀಸರಿಗೆ ಮತ್ತು ಇತರರಿಗೆ ತಿಳಿದು ಬಂದಿದೆ.
323, 326 ಮತ್ತು 34 ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರೂ, ಅಪರಾಧಿಗಳನ್ನು ಬಂಧಿಸಲಾಗಿದೆಯೇ ಎಂಬುದು ತಿಳಿದು ಬಂದಿಲ್ಲ.
ವೃತ್ತಿಯಲ್ಲಿ ಕ್ಷೌರಿಕನಾಗಿದ್ದ ಇಖ್ಲಾಕ್ ಆಗಸ್ಟ್ 23 ರಂದು ಉದ್ಯೋಗ ಹುಡುಕಿಕೊಂಡು ಸಹ್ರಾನ್ಪುರ ಜಿಲ್ಲೆಯ ತನ್ನ ಊರಾದ ನಾನೌತ್ನ್ನು ತೊರೆದಿದ್ದ.
ಪಾಣಿಪತ್ನ ಚಾಂದ್ನಿಬಾಗ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ ಅವರ ಸಹೋದರ ಇಕ್ರಮ್ ಅವರ ಪ್ರಕಾರ, ಅವರು ಆಗಸ್ಟ್ 24 ರಂದು ಮಧ್ಯಾಹ್ನ 1.30 ರ ಸುಮಾರಿಗೆ ಕಿಶನ್ಪುರ ಪ್ರದೇಶದ ಉದ್ಯಾನವನದಲ್ಲಿ ಕುಳಿತಿದ್ದಾಗ ಕೆಲವು ಯುವಕರು ಆತನ ಬಳಿಗೆ ಹೋಗಿ ಹೆಸರನ್ನು ಕೇಳಿದರು.
“ಅವರು ಅವನ ಗುರುತನ್ನು ತಿಳಿದ ತಕ್ಷಣ, ಅವನನ್ನು ಹಿಗ್ಗಾಮುಗ್ಗಾ ಥಳಿಸಿ ಗಾಯಗೊಂಡ ಸ್ಥಿತಿಯಲ್ಲಿ ರಸ್ತೆಯಲ್ಲಿ ಬಿಟ್ಟರು.
ಪೊಲೀಸರಿಗೆ ನೀಡಿದ ಹೇಳಿಕೆಗಳ ಪ್ರಕಾರ, ಇಖ್ಲಾಕ್ಗೆ ಬಾಯಾರಿಕೆಯಾಗಿದ್ದರಿಂದ, ಆತ ಹತ್ತಿರದ ಮನೆಗೆ ಹೋಗಿ ನೀರು ಕೇಳಿದ್ದನು. ಆದರೆ, ಮನೆಯ ನಿವಾಸಿಗಳು ಅವನನ್ನು ಮನೆಯೊಳಗೆ ಎಳೆದುಕೊಂಡು ಹೋಗಿ ಕೆಟ್ಟದಾಗಿ ಥಳಿಸಿದರು. ಉದ್ಯಾನವನದಲ್ಲಿ ಅವನನ್ನು ಹೊಡೆದ ವ್ಯಕ್ತಿಗಳು ಅವರೇ ಆಗಿದ್ದರು ಎಂಬುದು ಇಖ್ಲಾಕ್ಗೆ ನಂತರ ಮನವರಿಕೆ ಆಗಿದೆ ಎಂದು ತಿಳಿಸಿದ್ದಾರೆ.
ಇಕ್ರಾಮ್ ಪ್ರಕಾರ, ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಕೆಲವು ಮುಸ್ಲಿಮರು ಅದೃಷ್ಟಶಾಲಿ ಎಂದು ಪರಿಗಣಿಸಲ್ಪಟ್ಟಿರುವ “786” ಅವರ ಕೈಯಲ್ಲಿ ಹಚ್ಚೆ ಹಾಕಿರುವುದನ್ನು ಯುವಕರು ನೋಡಿದಾಗ, ‘ಈ ಚಿಹ್ನೆಯನ್ನು ನಿನ್ನ ಕೈಯಲ್ಲಿ ಇರಲು ಬಿಡುವುದಿಲ್ಲ’ ಎಂದು ಹೇಳಿದರು. ನಂತರ ಇಖ್ಲಾಕ್ನ ಕೈಯನ್ನು ಮೊಣಕೈ ಕೆಳಗೆ ಮರ ಕತ್ತರಿಸುವ ಯಂತ್ರದಿಂದ ಕತ್ತರಿಸಿದರು.
ನಾಲ್ವರು ಪುರುಷರಲ್ಲದೆ, ಮನೆಯ ಇಬ್ಬರು ಮಹಿಳೆಯರೂ ಈ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ಇಖ್ಲಾಕ್, ಇಕ್ರಮ್ಗೆ ತಿಳಿಸಿದ್ದಾರೆಂದು ವರದಿಯಾಗಿದೆ.
ತದನಂತರ ಇಖ್ಲಾಕ್ ಮೃತಪಟ್ಟಿದ್ದಾನೆಂದು ಭಾವಿಸಿದ ಕುಟುಂಬವು ರೈಲ್ವೆ ಹಳಿಗೆ ಆತನ ದೇಹವನ್ನು ಎಸೆದು ಅಪಘಾತವೆಂದು ಸಾಬೀತು ಪಡಿಸಲು ಪ್ರಯತ್ನಿಸಿದ್ದಾರೆ.
ಆದರೆ, ಅದೃಷ್ಟವಶಾತ್ ರೈಲ್ವೆ ಪೊಲೀಸರು ಆತನನ್ನು ಪಾಣಿಪತ್ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿದ್ದ ಪೋಲಿಸರು ಇದು ಅಪಘಾತ ಪ್ರಕರಣ ಎಂದು ಹೇಳಿದ್ದರು ಎಂಬುದಾಗಿ ಇಕ್ರಮ್ ಹೇಳಿದ್ದಾರೆ.
ನಂತರ,ಇಖ್ಲಾಕ್ರನ್ನು ರೋಹ್ಟಕ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಮತ್ತು ಅಲ್ಲಿಂದ ನಾನೌತ್ಗೆ ಕರೆದೊಯ್ಯಲಾಯಿತು ಎಂಬುದಾಗಿ ವರದಿಯಾಗಿದೆ.
ये लड़का नानोता सहारनपुर का है पानीपत में काम ढूंढ़ने गया था।पानी मांगने पर इसपे हमला किया,आरा मशीन में इसका हाथ कटा गया, और अधमरा रेल्वे लाईन पर छोड़ दिया गया। वजह सिर्फ ये थी के इसका नाम इख़लाक़ सलमानी है।
आखिर और कितने अखलाक और पैहलु खान….? pic.twitter.com/s2jTNIyY70— sufiyan khan (@sufiyankhan8660) September 9, 2020
ये इख़लाक़ सलमानी हैं,
सहारनपुर का इख़लाक़ हरियाणा के पानीपत काम की तलाश में गया था, शाम को पार्क में बैठा था और प्यास लगने पर सामने घर से पानी मांगने गया,
जहाँ उसके साथ कुछ लोगो ने मारपीट की और यहाँ तक कि आरा मशीन से उसका एक हाथ का'ट दिया। और मरा हुआ समझ रेलवे लाइन पर छोड़ गए। pic.twitter.com/3QYgj60MNM
— Ashraf Hussain (@AshrafFem) September 10, 2020
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












