ದಲಿತನಾದ್ದರಿಂದ ರಾಷ್ಟ್ರಪತಿ ಬಡವರ ಜೊತೆ ನಿಲ್ಲುತ್ತಾರೆಂದು ತಿಳಿಯಲು ಸಾಧ್ಯವಿಲ್ಲ- ಜಿಗ್ನೇಶ್ ಮೇವಾನಿ

0
583

ಸನ್ಮಾರ್ಗ ವಾರ್ತೆ

ಅಹ್ಮದಾಬಾದ್,ಸೆ.28: ರೈತರು ಮತ್ತು ಪ್ರತಿಪಕ್ಷದ ಪ್ರತಿಭಟನೆಯನ್ನು ಕಡೆಗಣಿಸಿ ರೈತ ಮಸೂದೆಗೆ ಸಹಿಹಾಕಿದ ರಾಷ್ಟ್ರಪತಿ ರಾಮನಾಥ ಕೋವಿಂದ್‍ರನ್ನು ದಲಿತ ನಾಯಕ ಶಾಸಕರೂ ಆದ ಜಿಗ್ನೇಶ್ ಮೇವಾನಿ ಟೀಕಿಸಿದ್ದಾರೆ.

ಪರಿಶಿಷ್ಟ ಜಾತಿಯ ವ್ಯಕ್ತಿ ಎನ್ನುವ ಕಾರಣದಿಂದ ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರ ಜೊತೆ ನಿಲ್ಲುತ್ತಾರೆ ಎಂದು ಭಾವಿಸಲು ಆಗದು ಎಂದು ಅವರು ಹೇಳಿದರು. ಪರಿಶಿಷ್ಟ ಜಾತಿಯ ವ್ಯಕ್ತಿಯಾಗಿದ್ದರಿಂದ ಬಡವರೂ, ಮೂಲೆಗೊತ್ತಲ್ಪಟ್ಟವರ, ದಲಿತರ, ರೈತರ ಹಿತಾಸಕ್ತಿಯನ್ನು ಚಿಂತಿಸುವರೆಂದು ನಿರೀಕ್ಷಿಸುವಂತಿಲ್ಲ ಎಂದು ಮೇವಾನಿ ಹೇಳಿದರು. ಆದರೆ, ಉನ್ನತ ಜಾತಿಯಲ್ಲಿ ಹುಟ್ಟಿದ ಕಾರಣದಿಂದ ಓರ್ವ ಬಡವರ ವಿರುದ್ಧ ಕೆಲಸ ಮಾಡುವ ವ್ಯಕ್ತಿಯೂ ಆಗಬೇಕೆಂದಿಲ್ಲ ಎಂದು ಜಿಗ್ನೇಶ್ ಮೇವಾನಿ ಹೇಳಿದರು.

ಇಡೀ ದೇಶದಲ್ಲಿ ರೈತ ಮಸೂದೆಯ ವಿರುದ್ಧ ಪ್ರತಿಭಟನೆ ನಡೆಯುತ್ತಿರುವುದರ ನಡುವೆಯೇ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ. ಮಸೂದೆಗೆ ಸಹಿ ಹಾಕಬಾರದೆಂದು ಪಾರ್ಲಿಮೆಂಟಿನ ಮರು ಪರಿಶೀಲನೆಗೆ ಕಳುಹಿಸಬೇಕೆಂದು ಪ್ರತಿಪಕ್ಷ ಆಗ್ರಹಿಸಿತ್ತು. ಈ ಬೇಡಿಕೆಯನ್ನು ರಾಷ್ಟ್ರಪತಿ ತಿರಸ್ಕರಿಸಿದ್ದು ಮಸೂದೆಗೆ ಸಹಿ ಹಾಕಿ ಅಂಗೀಕಾರ ನೀಡಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.