‘ಫಾರೂಕ್ ಅಬ್ದುಲ್ಲಾರನ್ನು ದತ್ತು ಪಡೆದುಕೊಳ್ಳಿ’: ಚೀನಾ ರಾಯಭಾರಿ ಬೋರ್ಡ್‌ ಮೇಲೆ ಪೋಸ್ಟರ್ ಅಂಟಿಸಿದ ಹಿಂದೂ ಸೇನಾ

0
546

ಸನ್ಮಾರ್ಗ ವಾರ್ತೆ

ನವದೆಹಲಿ,ಅ.14: ಚೀನಾ ಮತ್ತು ಆರ್ಟಿಕಲ್ 370ರ ಕುರಿತು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾರವರ ಹೇಳಿಕೆಯನ್ನು ಖಂಡಿಸಿ ಬಲಪಂಥೀಯ ಸಂಘಟನೆಯಾದ ಹಿಂದೂ ಸೇನಾ ದೆಹಲಿಯ ಚೀನೀ ರಾಯಭಾರಿ ಕಚೇರಿಯ ಸಂಕೇತ ಫಲಕದಲ್ಲಿ ‘ದಯವಿಟ್ಟು ಫಾರೂಕ್ ಅಬ್ದುಲ್ಲಾರನ್ನು ದತ್ತುಪಡೆದುಕೊಳ್ಳಿ” ಎಂಬ ಪೋಸ್ಟರ್‌ಗಳನ್ನು ಅಂಟಿಸಿದೆ.

“ಅವರನ್ನು (ಅಬ್ದುಲ್ಲಾರನ್ನು) ಚೀನಾಕ್ಕೆ ಕರೆದೊಯ್ಯಿರಿ” ಎಂಬುದಾಗಿ ಪೋಸ್ಟರ್‌ಗಳಲ್ಲಿ ಬರೆಯಲಾಗಿದೆ.

ಫಾರೂಕ್ ಅಬ್ದುಲ್ಲಾ ಸಂದರ್ಶನವೊಂದರಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ಚೀನಾದ ಬೆಂಬಲದೊಂದಿಗೆ ಪುನಃಸ್ಥಾಪಿಸಲು ಹೇಳಿಕೆ ನೀಡಿದ್ದರು.