ಬಿಜೆಪಿ ಸಚಿವನ ಸಹಾಯಕನಿಂದ ಹಾಡಹಗಲೇ ಯುವಕನ ಹತ್ಯೆ

0
543

ಸನ್ಮಾರ್ಗ ವಾರ್ತೆ

ಲಕ್ನೊ,ಅ.16: ಉತ್ತರಪ್ರದೇಶದ ಬಲಿಯಾ ಗ್ರಾಮದಲ್ಲಿ ಬಿಜೆಪಿ ಶಾಸಕ ಸುರೇಂದ್ರ ಸಿಂಗ್‍ರ ಸಹಾಯಕ ಬಿಜೆಪಿ ಕಾರ್ಯಕರ್ತ ಯುವಕನನ್ನು ಹಾಡಹಗಲೇ ಗುಂಡು ಹಾರಿಸಿ ಕೊಲೆ ಮಾಡಿದ ಘಟನೆ ನಡೆದಿದೆ.

ಎನ್‍ಐಎ ಹೊರಬಿಟ್ಟ ದೃಶ್ಯಗಳಲ್ಲಿ ಗದ್ದೆಯಲ್ಲಿ ಜನರು ಓಡಾಡುತ್ತಿರುವುದು ಕಂಡು ಬಂದಿದೆ. ಕೊಲೆ ಆರೋಪಿ ದಿರೇಂದ್ರ ಸಿಂಗ್ 46 ವರ್ಷದ ಜಯ ಪ್ರಕಾಶ್ ಎಂಬಾತನನ್ನು ಕೊಲೆಗೈದಿದ್ದು ರೇಶನ್ ಅಂಗಡಿ ಅನುಮತಿಸುವ ವಿವಾದಕ್ಕೆ ಸಂಬಂಧಿಸಿ ಕೊಲೆ ನಡೆಯಿತೆನ್ನಲಾಗಿದೆ. ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳನ್ನು ಅಮಾನತು ಗೊಳಿಸಲಾಗಿದೆ.

ಆರೋಪಿ ಧೀರೇಂದ್ರ ಸಿಂಗ್ ಬಿಜೆಪಿ ಎಕ್ಸ್ ಸರ್ವಿಸ್‍ಮೆನ್ ಯುನಿಟ್ ಮುಖ್ಯಸ್ಥನಾಗಿದ್ದು, ಇಂತಹ ಘಟನೆ ಎಲ್ಲಿಯೂ ನಡೆಯಬಹುದು ಎಂದು ಶಾಸಕರು ಹೇಳಿದ್ದಾರೆ. ಇದು ಎಲ್ಲಿಯೂ ಸಂಭವಿಸಬಹುದಾದ ಒಂದು ಸಾಮಾನ್ಯ ಅವಗಢ. ಇದರಲ್ಲಿ ಎರಡೂ ಕಡೆಯವರೂ ಕಲ್ಲೆಸೆದಿದ್ದಾರೆ. ಈ ವಿಷಯದಲ್ಲಿ ಕಾನೂನಿ ದಾರಿಯಲ್ಲಿ ಸಾಗಲಿದೆ ಎಂದು ಬಿಜೆಪಿ ಶಾಸಕರು ಹೇಳಿದ್ದಾರೆ.

ಕೊಲೆಯಾದ ವ್ಯಕ್ತಿಯ ಸಹೋದರ ನೀಡಿದ ದೂರಿನಲ್ಲಿ 15-20 ಮಂದಿಯ ವಿರುದ್ಧ ಕೇಸು ದಾಖಲಿಸಲಾಗಿದೆ. ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಮುಖ್ಯಮಂತ್ರಿ ಯೋಗಿಯ ಸೂಚನೆಯಂತೆ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಘಟನೆಯಲ್ಲಿ ಅಧಿಕಾರಗಳ ಪಾತ್ರವನ್ನು ತನಿಖಿಸಲಾಗುವುದು ಎಂದು ಯೋಗಿ ಆದಿತ್ಯನಾಥ್ ಹೇಳಿದರು.

ದುರ್ಜನಪುರದ ಗ್ರಾಮದ ರೇಶನ್ ಅಂಗಡಿ ಅನುಮತಿಸುವ ವಿಚಾರದಲ್ಲಿ ಸಭೆ ಕರೆಯಲಾಗಿತ್ತು. ಈ ವೇಳೆ ಎರಡು ವಿಭಾಗಗಳ ನಡುವೆ ವಿವಾದ ಸೃಷ್ಟಿಯಾಗಿತ್ತು. ಸಭೆಯನ್ನು ರದ್ದು ಪಡಿಸಲಾಗಿತ್ತು. ನಂತರ ಜಯಪ್ರಕಾಶರನ್ನು ಧೀರೇಂದ್ರ ಸಿಂಗ್ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ ಎಂದು ಎಸ್ಪಿ ದೇವೇಂದ್ರನಾಥ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಸಭೆಯಲ್ಲಿ ಹಲವಾರು ಮಂದಿ ನೆರೆದಿದ್ದರು. ಸ್ಥಳೀಯಾಡಳಿತದ ಅಧಿಕಾರಿಗಳು, ಊರಿನವರು, ಗ್ರಾಮಸ್ಥರು ಸಭೆಗೆ ಬಂದಿದ್ದರು.