ಸನ್ಮಾರ್ಗ ವಾರ್ತೆ
ಕೊಲ್ಕತಾ,ಅ.21: ದುರ್ಗಾ ಪೂಜೆ ಸಮಿತಿಗೆ 50,000 ರೂಪಾಯಿಯಂತೆ ನೆರವು ಘೋಷಿಸಿದ ಪಶ್ಚಿಮ ಬಂಗಾಳದ ಸರಕಾರದ ನಿರ್ಧಾರವನ್ನು ನೋಬೆಲ್ ಪಾರಿತೋಷಕ ವಿಜೇತ ಅರ್ಥ ತಜ್ಞ ಅಭಿಜಿತ್ ಬ್ಯಾನರ್ಜಿ ಬೆಂಬಲಿಸಿದ್ದಾರೆ. ಕೊರೋನ ಸುರಕ್ಷಾ ಮಾನದಂಡಗಳನ್ನು ಖಚಿತಪಡಿಸಲು ಸಂಘಟಕರಿಗೆ ಹೆಚ್ಚು ಹಣದ ಅಗತ್ಯವಿದೆ. ವೈರಸ್ನಿಂದ ಸುರಕ್ಷೆ ಪ್ರಧಾನವಾಗಿದೆ ಎಂದು ಅಭಿಜಿತ್ ಹೇಳಿದ್ದಾರೆ. ಕೊರೋನದಿಂದ ಅರ್ಥವ್ಯವಸ್ಥೆಗೆ ದೊಡ್ಡ ಮಟ್ಟದ ಹಾನಿಯಾಗಿದೆ. ಉದ್ಯೋಗ ಮಾರುಕಟ್ಟೆಯ ಮೂಲಕ ಒಂದು ವರ್ಷದೊಳಗೆ ಚೇತರಿಸಿಕೊಳ್ಳಲು ಸಾಧ್ಯವಿದೆ ಎಂದು ಉದ್ಯೋಗ ನಷ್ಟದ ಕುರಿತ ಪ್ರಶ್ನೆಗೆ ಅವರು ಹೇಳಿದರು.
ರೈಲುಗಳು, ಬಸ್ಸುಗಳಿಗಿಂತ ಉತ್ತಮ ವಾಯು ಸಂಚಾರ ಹೊಂದಿವೆ. ಆದುದರಿಂದ ಸ್ಥಳೀಯ ರೈಲುಗಳನ್ನು ಪುನಾರಂಭಿಸುವ ಕುರಿತು ಭಿನ್ನಾಭಿಪ್ರಾಯಗಳಿಲ್ಲ. ಆದರೆ ಕೆಲವು ನಿಯಂತ್ರಣಗಳೂ ಅಗತ್ಯ. ಜನರು ಮಾಸ್ಕ್ ಧರಿಸುವುದು ಸಹಿತ ಸುರಕ್ಷಾ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕೆಂದು ಅಭಿಜಿತ್ ಬ್ಯಾನರ್ಜಿ ಹೇಳಿದರು.
ದುರ್ಗಾ ಪೂಜೆ ಪಶ್ಚಿಮ ಬಂಗಾಳದಲ್ಲಿ ಅತಿದೊಡ್ಡ ಆಚರಣೆಯಾಗಿದೆ. ಆದ್ದರಿಂದ ದುರ್ಗಾ ಪೂಜೆಯ ಸಮಿತಿಗಳಿಗೆ 50,000 ರೂಪಾಯಿಯಂತೆ ನೀಡುವ ತೀರ್ಮಾನವನ್ನು ಸಕರಾರ ಪ್ರಕಟಿಸಿದೆ. ಜೊತೆಗೆ ಒಂದು ಬಾರಿಗೆ 80,000 ಬೀದಿ ವ್ಯಾಪಾರಿಗಳಿಗೆ ತಲಾ 2000ರೂಪಾಯಿ ಸಹಾಯ ಧನ ನೀಡುವುದಾಗಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಇದೇವೇಳೆ, ದುರ್ಗಾ ಪೂಜೆಯ ಚಪ್ಪರಕ್ಕೆ ಸಂದರ್ಶಕರ ಭೇಟಿಯನ್ನು ನಿಷೇಧಿಸಿ ಕೊಲ್ಕತಾ ಹೈಕೋರ್ಟು ಆದೇಶ ಹೊರಡಿಸಿದೆ.












