ಪಾಲ್ಘರ್| ಸನ್ಯಾಸಿಗಳ ಸಾಮೂಹಿಕ ಹತ್ಯೆ ಪ್ರಕರಣ: ಮತ್ತೆ 24 ಆರೋಪಿಗಳ ಬಂಧನ

0
609

ಸನ್ಮಾರ್ಗ ವಾರ್ತೆ

ಪಾಲ್ಘರ್,ಅ.22: ಮಹಾರಾಷ್ಟ್ರ ಪಾಲ್ಘರ್‌ನಲ್ಲಿ ಇಬ್ಬರು ಸನ್ಯಾಸಿಗಳನ್ನು ಮತ್ತು ಇವರ ಚಾಲಕನನ್ನು ಜನರ ಗುಂಪೊಂದು ಸೇರಿ ಕೊಲೆ ಮಾಡಿದ ಘಟನೆಯಲ್ಲಿ ಮತ್ತೆ 24 ಮಂದಿಯನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣವನ್ನು ಮಹಾರಾಷ್ಟ್ರ ಪೊಲೀಸ್‍ನ ಸಿಐಡಿ ವಿಭಾಗ ಆರೋಪಿಗಳನ್ನು ಬಂಧಿಸಿದೆ. ಪ್ರಕರಣದಲ್ಲಿ ಈವರೆಗೆ ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳ ಸಹಿತ 128 ಮಂದಿಯನ್ನು ಬಂಧಿಸಲಾಗಿದೆ. ಎಪ್ರಿಲ್ 16ಕ್ಕೆ ನಡೆದ ಘಟನೆಯಲ್ಲಿ ಮೂರು ಎಫ್‍ಐಆರ್ ದಾಖಲಾಗಿದೆ.

ಪ್ರಕರಣದಲ್ಲಿ 208 ಮಂದಿ ಆರೋಪಿಗಳನ್ನು ಸಿಐಡಿ ಸೇರಿಸಿದೆ. ಒಟ್ಟು ಹನ್ನೊಂದು ಮಕ್ಕಳ ಸಹಿತ 366 ಮಂದಿ ಆರೋಪಿಗಳಿದ್ದಾರೆ. ಆರೋಪ ಪಟ್ಟಿಯಲ್ಲಿ ಶಾಮೀಲಾಗಿರುವುದನ್ನು ಸಿಐಡಿಗೆ ಚಾರ್ಜ್‍ಶೀಟ್‍ನಲ್ಲಿ ಸ್ಪಷ್ಟಪಡಿಸಲು ಸಾಧ್ಯವಾಗದ್ದರಿಂದ 9 ಮಕ್ಕಳ ಸಹಿತ 28 ಆರೋಪಿಗಳಿಗೆ ಜಾಮೀನು ಸಿಕ್ಕಿತ್ತು. 62 ಮಂದಿಯ ಜಾಮೀನು ಕೋರ್ಟಿನ ಪರಿಗಣನೆಯಲ್ಲಿದೆ.