ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಅ.23: ಭಾರತದಲ್ಲಿ ವಾಯು ಮಲಿನಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಟ್ ಟ್ರಂಪ್‍ರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಇದು ಹೌದು ಮೋದಿಯ ಫಲವಾಗಿದೆ ಎಂದು ಹೇಳಿದ್ದಾರೆ. ಟ್ರಂಪ್‍ರ ನಿಕಟ ಮಿತ್ರ ಎನ್ನುವ ಮೋದಿಗೆ ಸಿಕ್ಕಿದ ಉತ್ತರ ಇದು ಸಿಬಲ್ ಟ್ವೀಟ್ ಮಾಡಿದ್ದಾರೆ. ಟ್ರಂಪ್ ಅತ್ಯಂತ ಉತ್ತಮ ಗೆಳೆಯ ಮೊದಲು ಭಾರತದ ಕೊರೋನ ಮೃತ್ಯು ಸಂಖ್ಯೆಯನ್ನು ಪ್ರಶ್ನಿಸಿದರು. ಭಾರತದಲ್ಲಿ ಹವಾಮಾನ ಮಲಿನವಾಗಿದೆ ಎಂದು ಎಂದು ಹೇಳಿದ್ದಾರೆ. ಮೂರನೆಯದಾಗಿ ಭಾರತವನ್ನು ಟಾರಿಫ್ ರಾಜ ಎಂದರು. ಇವೆಲ್ಲ ಹೌದಿ ಮೋದಿಯ ಫಲ! ಎಂದು ಸಿಬಲ್ ಟ್ವೀಟ್ ಮಾಡಿದ್ದಾರೆ.
ಅಮೆರಿಕದಲ್ಲಿ ನಡೆದಿದ್ದ ಹೌಡಿ-ಮೋದಿ ಕಾರ್ಯಕ್ರಮದಲ್ಲಿ ಭಾರತದ ವಂಶೀಯರನ್ನು ಉದ್ದೇಶಿಸಿ ಮಾತಾಡಿದ ಮೋದಿ ಮತ್ತೊಮ್ಮೆ ಟ್ರಂಪ್ ಸರಕಾರ ಎಂದು ಹೇಳಿಕೆ ನೀಡಿದ್ದರು. ತನ್ನ ನಿಕಟ ಮಿತ್ರ ಎಂದು ಟ್ರಂಪ್‍ರನ್ನು ಮೋದಿ ಹೇಳಿದ್ದರು. ಅಮೆರಿಕ ಅಧ್ಯಕ್ಷ ಚುನಾವಣೆಯ ಕೊನೆಯ ಸಂವಾದದ ವೇಳೆ ಟ್ರಂಪ್ ಭಾರತದ ವಾತಾವರಣ ಮಲಿನವಾಗಿದೆ ಎಂದು ಹೇಳಿಕೆ ನೀಡಿದ್ದರು. ಈ ಹಿಂದೆ ಕೊರೋನ ಸಾವಿನ ಕುರಿತು ಭಾರತ ತಪ್ಪು ಲೆಕ್ಕಗಳನ್ನು ನೀಡಿವೆ ಎಂದಿದ್ದರು.












