ಸನ್ಮಾರ್ಗ ವಾರ್ತೆ
ಮನಾಮ,ನ.25: ಬಹ್ರೈನ್ ಯುವರಾಜ ಸಲ್ಮಾನ್ ಅಲ್ ಖಲೀಫರ ಆಹ್ವಾನದ ಮೇರೆಗೆ ಶೀಘ್ರದಲ್ಲಿ ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬಹ್ರೈನ್ಗೆ ಭೇಟಿ ನೀಡಲಿದ್ದಾರೆ. ಅಮೆರಿಕದ ಮಧ್ಯಸ್ಥಿತಿಕೆಯಲ್ಲಿ ಇಸ್ರೇಲ್ ಯುಎಇಯ ನಂತರ ಬಹ್ರೈನ್ನೊಂದಿಗೂ ರಾಜತಾಂತ್ರಿಕ ಸಂಬಂಧ ಸ್ಥಾಪಿಸಿತ್ತು. ಇದು ಇರಾನ್ ವಿರುದ್ಧ ತಂತ್ರಪರವಾದ ಮಧ್ಯಪ್ರಾಚ್ಯದ ಸಖ್ಯವಾಗಿತ್ತು. ಇಸ್ರೇಲಿನೊಂದಿಗೆ ಯಾವುದೇ ರೀತಿಯ ಸಂಬಂಧ ಸ್ಥಾಪಿಸುವ ಗಲ್ಫ್ ದೇಶಗಳಲ್ಲಾದ ಬದಲಾವಣೆ ರಾಷ್ಟ್ರ ಸ್ಥಾನಮಾನ ಲಭಿಸಲು ಹೋರಾಡುತ್ತಿರುವ ಫೆಲಸ್ತೀನಿಯರ ಆಕ್ರೋಶಕ್ಕೆ ಕಾರಣವಾಗಿದೆ.
ಕಡಿಮೆ ಸಮಯದಲ್ಲಿ ನಮ್ಮ ಜನತೆ ಮತ್ತು ದೇಶದಲ್ಲಿ ಶಾಂತಿಯ ಪರಿಣಾಮಗಳನ್ನು ತರಲಿಕ್ಕಾಗಿ ಆವೇಶವನ್ನು ಹೊಂದಿದ್ದು ಅದರಿಂದ ತನ್ನನ್ನು ಬಹ್ರೈನ್ ಭೇಟಿಗೆ ಆಹ್ವಾನಿಸಲಾಗಿದೆ ಎಂದು ಬೆಂಜಮಿನ್ ಹೇಳಿದರು. ತನ್ನ ಮತ್ತು ಬಹ್ರೈನ್ ರಾಜಕುಮಾರನ ಫೋನ್ ಕರೆಯ ಕುರಿತು ಬೆಂಜಮಿನ್ ಮಂಗಳವಾರ ಹೇಳಿಕೊಂಡಿದ್ದಾರೆ.












