ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಎನ್‍ಆರ್‌ಐಗಳಿಗೆ ಟಪಾಲು ವೋಟು?

0
460

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಡಿ.1: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅನಿವಾಸಿ ಭಾರತೀಯರಿಗೆ(ಎನ್‍ಆರ್‌ಐ) ಅಂಚೆ ಬ್ಯಾಲೆಟ್‍ನಲ್ಲಿ ಮತದಾನಕ್ಕೆ ಅನುಮತಿ ನೀಡಬಹುದು ಎಂದು ಚುನಾವಣಾ ಆಯೋಗ ಕೇಂದ್ರ ಸರಕಾರಕ್ಕೆ ತಿಳಿಸಿದೆ.

ತಾಂತ್ರಿಕವಾಗಿ, ಆಡಳಿತಾತ್ಮಕವಾಗಿ ಇಲಕ್ಟ್ರಾನಿಕ್ ಟ್ರಾನ್ಸ್‌ಮಿಟೆಡ್ ಬ್ಯಾಲಟ್ ವ್ಯವಸ್ಥೆಯನ್ನು ಎನ್‍ಆರ್‌ಐ ಮತದಾರರಿಗೂ ನೀಡಲು ಸಾಧ್ಯವಿದೆ ಎಂದು ಚುನಾವಣಾ ಆಯೋಗ ಕಾನೂನು ಇಲಾಖೆಗೆ ತಿಳಿಸಿದೆ. ಕೇರಳ, ಅಸ್ಸಾಂ, ಪಶ್ಚಿಮ ಬೆಂಗಾಳ, ತಮಿಳ್ನಾಡು, ಪುದುಚೇರಿಗಳ ಚುನಾವಣೆಯಲ್ಲಿ ಇದು ಸಾಧ್ಯವಾಗಬಹುದು. 2021 ಎಪ್ರಿಲ್, ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ.

ಸುಮಾರು ಒಂದು ಕೋಟಿ ಭಾರತೀಯರು ವಿದೇಶಗಳಲ್ಲಿದ್ದು ಇವರಲ್ಲಿ 60 ಲಕ್ಷ ಮಂದಿ ಮತದಾನಕ್ಕೆ ಅರ್ಹರಾಗಿದ್ದಾರೆ. ಈಗ ಸರಕಾರಿ ಉದ್ಯೋಗಿ ಮತದಾರರಿಗೆ ಇಲಕ್ಟ್ರಾನಿಕಲಿ ಟ್ರಾನ್ಸ್‌ಮಿಟೆಡ್ ಬ್ಯಾಲೆಟ್ ವ್ಯವಸ್ಥೆಯನ್ನು ಉಪಯೋಗಿಸಲಾಗುತ್ತಿದೆ. ಈ ವ್ಯವಸ್ಥೆಯನ್ನು ಉಪಯೋಗಿಸಿ ಮೊದಲು ಇ-ಮೇಲ್ ಮೂಲಕ ಪೋಸ್ಟಲ್ ಬ್ಯಾಲೆಟ್ ಕಳುಹಿಸಲಾಗುವುದು. ನಂತರ ಪ್ರಿಂಟ್ ತೆಗೆದು ಮತಹಾಕಿ ಅಂಚೆಯ ಮೂಲಕ ಕಳುಹಿಸಬೇಕಿದೆ.

ವಿದೇಶಿ ಮತದಾರರಿಗೆ ಈ ಸೌಕರ್ಯ ವೊದಗಿಸಬೇಕಾದರೆ ಸರಕಾರ 1961ರ ಚುನಾವಣಾ ನಿಯಮದಲ್ಲಿ ತಿದ್ದುಪಡಿ ಮಾಡಬೇಕಾಗುತ್ತದೆ. ಆದರೆ, ಇದಕ್ಕೆ ಪಾರ್ಲಿಮೆಂಟಿನ ಅಂಗೀಕಾರ ಬೇಕಾಗಿಲ್ಲ. ಕಾನೂನು ತಿದ್ದುಪಡಿ ಬಂದರೆ, ಟಪಾಲು ಬ್ಯಾಲೆಟ್ ಪೇಪರ್ ಮೂಲಕ ಮತಹಾಕಲು ಬಯಸುವವರು ಚುನಾವಣಾ ಆಯೋಗದ ಪ್ರಕಟಣೆ ಹೊರಡಿಸಿ ಐದು ದಿನಗಳೊಳಗೆ ರಿಟರ್ನಿಂಗ್ ಅಧಿಕಾರಿಗೆ ತಿಳಿಸಬೇಕಾಗುತ್ತದೆ.