ವೈಟ್ ಹೌಸ್‍ನ ಉನ್ನತ ತಂಡದಿಂದ ಮಧ್ಯಪ್ರಾಚ್ಯ ಭೇಟಿ

0
388

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಡಿ.1: ವೈಟ್ ಹೌಸ್‌ನ ಸೀನಿಯರ ಸಲಹೆಗಾರ ಜೇಡ್ ಕೃಷ್ಣರ್ ಮತ್ತು ತಂಡ ಈ ವಾರ ಸೌದಿ ಅರೇಬಿಯ, ಕತರ್ ಸಂದರ್ಶಿಸಲಿದೆ. ಎರಡು ದೇಶಗಳ ನಡುವಿನ ಸಮಸ್ಯೆಯನ್ನು ಬಗೆಹರಿಸುವುದು ಸಂದರ್ಶನದ ಅಜೆಂಡಾವಾಗಿದೆ ಎಂದು ಅಲ್‍ ಜಝೀರ ವರದಿ ಮಾಡಿದೆ.

ಸೌದಿ, ಕತರ್ ನಾಯಕರನ್ನು ಕೃಷ್ಣರ್ ಭೇಟಿಯಾಗಲಿದ್ದಾರೆ. ಇರಾನ್ ಅಣು ಯೋಜನೆಯ ಮುಖ್ಯ ಸೂತ್ರಧಾರ ಎನ್ನಲಾದ ಮುಹ್ಸಿನ್ ಫಕ್ರಿಝಾದರ ಕೊಲೆ ನಡೆದ ಕೆಲವು ದಿವಸಗಳಲ್ಲಿ ಉನ್ನತ ಅಮೆರಿಕನ್ ತಂಡ ಮಧ್ಯಪ್ರಾಚ್ಯಕ್ಕೆ ಭೇಟಿ ನೀಡುತ್ತಿದೆ.

ಬರಾಕ್ ಒಬಾಮರ ಕಾಲದಲ್ಲಿ ಇರಾನಿನೊಂದಿಗೆ ಸ್ವೀಕರಿಸಿದ ನಿಲುವು ಮತ್ತು ನಿಯೋಜಿತ ಅಮೆರಿಕ ಅಧ್ಯಕ್ಷ ಜೊ ಬೈಡನ್ ಸ್ವೀಕರಿಸಲಿದ್ದಾರೆ ಎಂದು ರಾಜಕೀಯ ಮೂಲಗಳು ಹೇಳುತ್ತಿವೆ.

ಟೆಹ್ರಾನ್ ನಿಬಂಧನೆ ಪಾಲಿಸಿದರೆ ಟ್ರಂಪ್ ರದ್ದುಪಡಿಸಿದ ಇರಾನಿನೊಂದಿಗಿನ ಅಂತಾರಾಷ್ಟ್ರೀಯ ಅಣು ಒಪ್ಪಂದ ಪುನಃ ಸಕ್ರಿಯಗೊಳ್ಳುವುದು ಎಂದು ಬೈಡನ್ ತಿಳಿಸಿದ್ದರು. ಇರಾನ್ ಪ್ರಭಾವಿ ವಲಯವನ್ನು ತಡೆಯುವ ಉದ್ದೇಶ ಗಲ್ಫ್ ದೇಶಗಳಿವೆ. ಈ ನಿಟ್ಟಿನಲ್ಲಿ ವೈಟ್ ಹೌಸ್ ತಂಡದ ಸಂದರ್ಶನಕ್ಕೆ ಪ್ರಾಮುಖ್ಯತೆ ಬಂದಿದೆ.