ಸನ್ಮಾರ್ಗ ವಾರ್ತೆ
ಮಲ್ಪೆ: ಒಂದು ಮಾನವ ಜೀವವನ್ನು ರಕ್ಷಿಸಿದವನು ಮಾನವ ಜನಾಂಗವನ್ನೇ ರಕ್ಷಿಸಿದಂತೆಯೆಂದು ಕುರ್ಆನ್ ನೀಡಿರುವ ಇಂತಹ ಮಾನವತೆಯ ಶಿಕ್ಷಣಗಳ ಉದಾಹರಣೆಗಳನ್ನೇ ಪ್ರವಾದಿವರ್ಯರ(ಸ) ಜೀವನದಲ್ಲಿ ಕಾಣಬಹುದಾಗಿದೆ. ಪ್ರವಾದಿಯವರ(ಸ) ಜೀವನವೇ ಸಮಾಜಲ್ಲಿ ಮಾನವೀಯ ಮೌಲ್ಯಗಳ ಸ್ಥಾಪನೆಯಾಗಿದೆ, ಪ್ರಸಕ್ತ ದ್ವೇಷ, ಅಸಹಿಷ್ಣುತೆ, ಅನ್ಯಾಯ, ಹಿಂಸೆ ಆದಿಗಳಿಂದ ಕಲುಷಿತಗೊಳ್ಳುತ್ತಿರುವ ಸಮಾಜದಲ್ಲಿ ಅವರ ನ್ಯಾಯ ಮತ್ತು ಮಾನವೀಯತೆಯ ಶಿಕ್ಷಣಗಳನ್ನು ಸ್ಥಾಪಿಸುವ ಅಗತ್ಯವಿದೆ, ಲಭಿಸಬಹುದಾದ ಹೆಚ್ಚೆಚ್ಚು ಅವಕಾಶಗಳನ್ನು ಉಪಯೋಗಿಸಬೇಕಾಗಿದೆಯೆಂದು ಸಾಮಾಜಿಕ ಕಾರ್ಯಕರ್ತ ಆರ್. ಎಮ್.ಸಿದ್ದೀಕ್ ಹೇಳಿದರು
ಅವರು ಮಲ್ಪೆಯ ಜಮಾಅತೆ ಇಸ್ಲಾಮೀ ಹಿಂದ್ ಹಾಗೂ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ| ವೇಣುಗೋಪಾಲ್ ಮಾತನಾಡಿ ಇಂತಹ ರಕ್ತದಾನ ಶಿಬಿರಗಳು ಬಹು ಪ್ರಾಮುಖ್ಯತೆ ಹೊಂದಿವೆ. ಇಲ್ಲಿಂದ ಈ ಹಿಂದೆಯೂ ರಕ್ತ ದಾನ ಮಾಡಲಾಗಿದೆ. ಇಂತಹ ಸಮಾಜಮುಖಿ ಕಾರ್ಯಗಳು ವ್ಯಾಪಕವಾಗಿ ನಡೆಯಬೇಕಾಗಿದೆ ಎಂದರು. ಸ್ಥಾನೀಯ ಜಮಾಅತ್ ಅಧ್ಯಕ್ಷ ಉಸ್ತಾದ್ ರಫೀಕ್ ಸ್ವಾಗತಿಸಿ ಧನ್ಯವಾದ ಅರ್ಪಿಸಿದರು. ಜಮಾಅತ್ನ ಉಡುಪಿ ಜಿಲ್ಲಾ ಸಂಚಾಲಕ ಶಬ್ಬೀರ್.ಎಂ ಉಪಸ್ಥಿತರಿದ್ದರು.
ತುಂಬಾ ಸೀಮಿತ ಸಮಯದ ಸೂಚನೆಯ ಹೊರತಾಗಿಯೂ ಸ್ಪಂದಿಸಿ 50 ರಷ್ಟು ಮಂದಿ ರಕ್ತದಾನ ಮಾಡಿದ್ದು, ಮಾನವೀಯ ಹೃದಯವಂತಿಕೆ ತೋರಿದ ಎಲ್ಲಾ ರಕ್ತದಾನಿಗಳಿಗೂ ಕೃತಜ್ಞತೆ ಸಲ್ಲಿಸಿದ ಸ್ಥಾನೀಯ ಅಧ್ಯಕ್ಷರು ರಕ್ತನಿಧಿ ತಂಡದ ಸಹಕಾರಕ್ಕೂ ಕೃತಜ್ಞತೆ ಪ್ರಕಟಿಸಿದರು.













