ಅರುಣಾಚಲಪ್ರದೇಶದ ಸಮೀಪದಲ್ಲಿಯೇ ಮೂರು ಗ್ರಾಮಗಳನ್ನು ನಿರ್ಮಿಸಿದ ಚೀನಾ!

0
568

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಡಿ.7: ಭಾರತ-ಚೀನ ಘರ್ಷಣೆ ಇರುವ ಅರುಣಾಚಲಪ್ರದೇಶದ ಸಮೀಪದಲ್ಲಿ ಚೀನ ಮೂರು ಗ್ರಾಮಗಳನ್ನು ನಿರ್ಮಿಸಿದೆ. ಕಮ್ಯೂನಿಸ್ಟ್ ಪಾರ್ಟಿ ಸದಸ್ಯರನ್ನು ಅಲ್ಲಿಗೆ ಕಳುಹಿಸಲಾಗಿದೆ. ಪಶ್ಚಿಮ ಅರುಣಾಚಲಪ್ರದೇಶದಲ್ಲಿ ಭಾರತ, ಚೀನ, ಭೂತಾನ್ ದೇಶಗಳ ಗಡಿ ಭೂಂ ಲಾ ಪಾಸ್‍ಗೆ ಕೇವಲ ಐದು ಕಿಲೊಮೀಟರ್ ದೂರದಲ್ಲಿ ಮೂರು ಗ್ರಾಮಗಳನ್ನು ನಿರ್ಮಿಸಿ ಅಲ್ಲಿ ಜನರಿಗೆ ಜಾಗಕೊಟ್ಟಿದೆ. ಇದು ಭಾರತ ಚೀನ ಗಡಿ ವಿವಾದ ಇರುವ ಪ್ರದೇಶವಾಗಿದೆ.
ಪ್ರತಿಯೊಂದ ಕಿಲೋ ಮೀಟರ್ ಅಂತರದಲ್ಲಿ ಮೂರು ಗ್ರಾಮಗಳಿದ್ದು ಉತ್ತಮ ಡಾಮರು ರಸ್ತೆಗಳು ಗ್ರಾಮವನ್ನು ಜೋಡಿಸುತ್ತವೆ. ಕಮ್ಯುನಿಸ್ಟ್ ಪಾರ್ಟಿಯ ಹಾನ್ ಚೈನೀಸ್, ಟಿಬೆಟಿಯನ್ನರನ್ನು ಭಾರತದ ಗಡಿಯಲ್ಲಿ ಚೀನ ಇರಿಸಿದೆ. ಭಾರತ ಚೀನ ಸೈನಿಕರ ನಡುವೆ ಘರ್ಷಣೆ ನಡೆದ ದೊಕ್‍ಲಾಮಕ್ಕೆ ಏಳು ಕಿಲೊ ಮೀಟರ್ ವ್ಯಾಪ್ತಿಯಲ್ಲಿ ಚೀನ ಮಾಡಿದ ಗ್ರಾಮಗಳು ಇವು.

ಪೂರ್ವ ಲಡಾಕಿನಲ್ಲಿ ಇತ್ತೀಚೆಗೆ ಭಾರತ, ಚೀನ ಘರ್ಷಣೆ ನಡೆದ ವೇಳೆ ಚೀನ ಹೊಸ ಗ್ರಾಮಗಳನ್ನು ನಿರ್ಮಿಸಿತ್ತು. ಎನ್‌ಡಿಟಿವಿ ಹೊಸ ಗ್ರಾಮಗಳ ವರದಿ ಮಾಡಿದ್ದು ಸೆಟಲೈಟ್ ಚಿತ್ರಗಳನ್ನು ಪ್ರಸಾರ ಮಾಡಿದೆ. ಫೆಬ್ರುವರಿ 17 ರವರೆಗೆ 20 ಕಟ್ಟಡಗಳನ್ನು ಚೀನ ನಿರ್ಮಿಸಿತ್ತು. ನವೆಂಬರ್ 28ಕ್ಕೆ ಅಲ್ಲಿ 50 ಕಟ್ಟಡಗಳು ನಿರ್ಮಾಣವಾಗಿವೆ. ಇನ್ನೂ ಹತ್ತು ಕಟ್ಟಡಗಳು ನಿರ್ಮಾಣ ಹಂತದಲ್ಲಿದೆ. ಇದುವರೆಗೆ ನಿರ್ಮಾಣ ಕಾಮಗಾರಿ ನಡೆಯದ ಈ ಪ್ರದೇಶದಲ್ಲಿ ಚೀನದ ಹೊಸ ಕ್ರಮ ಭಾರತದ ಭೂಪ್ರದೇಶಗಳಲ್ಲಿ ಹಕ್ಕುವಾದ ಮಂಡಿಸುವುದಕ್ಕಿರುವ ಹೆಜ್ಜೆಯೇ ಎಂಬ ಶಂಕೆ ತಲೆದೋರಿದೆ.