ಕೃಷಿ ಕಾನೂನುಗಳ ವಿರುದ್ಧ ಪ.ಬಂಗಾಳ ವಿಧಾನಸಭೆಯಲ್ಲಿಯೂ ಪ್ರಸ್ತಾವ ಪಾಸು ಮಾಡುತ್ತೇವೆ: ಮಮತಾ ಬ್ಯಾನರ್ಜಿ

0
363

ಸನ್ಮಾರ್ಗ ವಾರ್ತೆ

ಕೊಲ್ಕತಾ: ಮೋದಿ ಸರಕಾರದ ಕೃಷಿ ಕಾನೂನು ವಿರುದ್ಧ ಹೊಸ ಪ್ರಕ್ರಿಯೆಯತ್ತ ಮಮತಾ ಬ್ಯಾನರ್ಜಿ ಹೆಜ್ಜೆ ಇಟ್ಟಿದ್ದಾರೆ. ಕೃಷಿ ಕಾನೂನು ವಿರುದ್ಧ ಪ್ರಸ್ತಾವವನ್ನು ವಿಧಾನಸಭೆಯಲ್ಲಿ ಮಂಡಿಸಲು ತೃಣಮೂಲ ಕಾಂಗ್ರೆಸ್ ಸರಕಾರ ತೀರ್ಮಾನಿಸಿದೆ.

ಜನವರಿ 27ಕ್ಕೆ ಆರಂಭವಾಗುವ ಎರಡು ದಿನಗಳ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾವ ಮಂಡಿಸಲಾಗುವುದು. ಜ.28ಕ್ಕೆ ಸದನ ನಿಯಮ 169ರ ಪ್ರಕಾರ ಪ್ರಸ್ತಾವ ಮಂಡಿಸಲಾಗುವುದು ಎಂದು ಪಾರ್ಲಿಮೆಂಟು ವಿಷಯಗಳ ಸಚಿವ ಪಾರ್ಥ ಚಟರ್ಜಿ ಹೇಳಿದರು.

ಈ ಹಿಂದೆ ರೈತ ಕಾನೂನು ವಿರುದ್ಧ ಪಂಜಾಬ್, ಛತ್ತೀಸ್ ಗಡ, ರಾಜಸ್ಥಾನ, ಕೇರಳ, ದಿಲ್ಲಿ ಪ್ರಸ್ತಾವ ಪಾಸ್ ಮಾಡಿವೆ. ಮೋದಿ ಸರಕಾರದ ಕೃಷಿ ಕಾನೂನು ವಿರುದ್ಧ ಹೋರಾಟ ನಡೆಸುತ್ತಿರುವ ರೈತರನ್ನು ಬೆಂಬಲಿಸಿ ಕೊಲ್ಕತಾದಲ್ಲಿ ಮೂರು ದಿನಗಳ ಪ್ರತಿಭಟನೆ ಕಾರ್ಯಕ್ರಮಕ್ಕೆ ಮಮತಾ ಬ್ಯಾನರ್ಜಿ ಕರೆ ನೀಡಿದ್ದಾರೆ.

ರೈತರ ರಿಪಬ್ಲಿಕ್ ದಿನದ ಪರೇಡ್ ಹಿಂಸಾಗ್ರಸ್ತವಾಗಿತ್ತು. ಒಬ್ಬ ರೈತ ಮೃತಪಟ್ಟಿದ್ದಾರೆ. 100ಕ್ಕೂಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ದಿಲ್ಲಿ ಪೊಲೀಸರು 22 ಮಂದಿಯ ವಿರುದ್ಧ ಕೇಸು ಹಾಕಿದ್ದಾರೆ.