‘ಹೆಮ್ಮೆಯ ಆಂದೋಲನ್ ಜೀವಿ’- ಪಿ. ಚಿದಂಬರಂ ಟ್ವೀಟ್

0
535

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ನಾನೊಬ್ಬ ಹೆಮ್ಮೆಯ ಆಂದೋಲನ್ ಜೀವಿ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಹೇಳಿದ್ದಾರೆ. ಯಾರೂ ಕಡೆಗಣಿಸಲಾಗದ ಆಂದೋಲನ್ ಜೀವಿ ಮಹಾತ್ಮಾ ಗಾಂಧಿಯಾಗಿದ್ದಾರೆ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ. ಪಾರ್ಲಿಮೆಂಟಿನ ಬಜೆಟ್ ಸತ್ರದಲ್ಲಿ ರೈತರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ‘ಆಂದೋಲನ್ ಜೀವಿ’ ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಚಿದಂಬಂರಂ ಈ ರೀತಿ ಟ್ವೀಟ್ ಮಾಡಿದ್ದಾರೆ.

ಸೋಮವಾರ ಮೋದಿಯವರು ಕೃಷಿ ಕಾನೂನಿನ ವಿರುದ್ಧ ದಿಲ್ಲಿಯ ಗಡಿಯಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಪರಾನ್ನಭೋಜಿಗಳೆಂದು ಕರೆದು ಆಕ್ಷೇಪಿಸಿದ್ದರು.
ಶ್ರಮಜೀವಿ, ಬುದ್ಧಿಜೀವಿ ಪದಗಳ ಕುರಿತು ನಾನು ಪ್ರಜ್ಞಾವಂತನಾಗಿದ್ದೇನೆ. ಕೆಲವು ಹೊಸ ಜನರು ಈ ದೇಶದಲ್ಲಿ ಕಂಡು ಬರುತ್ತಾರೆ. ಆಂದೋಲನ್ ಜೀವಿಗಳು. ಪ್ರತಿಭಟನೆ ನಡೆದಲ್ಲೆಲ್ಲ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಅದು ವಕೀಲರ ಪ್ರತಿಭಟನೆ, ವಿದ್ಯಾರ್ಥಿಗಳ, ಕಾರ್ಮಿಕರ ಪ್ರತಿಭಟನೆಯಾಗಿರಲಿ. ಕೆಲವೊಮ್ಮೆ ಮುಂದೆ ಮತ್ತೆ ಕೆಲವು ಸಲ ಹಿಂದೆ ಅವರಿರುತ್ತಾರೆ. ಪ್ರತಿಭಟನೆಯಿಲ್ಲದೆ ಅವರಿಗೆ ಬದುಕಲು ಆಗುವುದಿಲ್ಲ. ಅಂತಹ ಜನರನ್ನು ನಾವು ಗುರುತಿಸಿ ದೇಶವನ್ನು ಅವರಿಂದ ರಕ್ಷಿಸಬೇಕಾಗಿದೆ. ಅವರು ಪರಾನ್ನಭೋಜಿಗಳು ಎಂದು ಪ್ರಧಾನಿ ರಾಜ್ಯಸಭೆಯಲ್ಲಿ ಹೇಳಿದ್ದರು.

ಕೇಂದ್ರ ತಂದಿರುವ ಮೂರು ಕೃಷಿ ಕಾನೂನು ವಿರುದ್ಧ ದಿಲ್ಲಿಯ ವಿವಿಧ ಗಡಿಗಳಲ್ಲಿ ಕಳೆದ ವರ್ಷ ನವೆಂಬರ್ 26ರಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ.