ಏಪ್ರಿಲ್ 1ರಂದು ಜನರು ಬಿಜೆಪಿಯನ್ನು ಫೂಲ್ ಮಾಡಲಿದ್ದಾರೆ: ಮಮತಾ ಬ್ಯಾನರ್ಜಿ

0
571

ಸನ್ಮಾರ್ಗ ವಾರ್ತೆ

ನಂದಿಗ್ರಾಮ: ಜನರ ಆವೇಶದ ಬೆಂಬಲ ಸಿಕ್ಕಿದ್ದರಿಂದ ನಂದಿಗ್ರಾಮದಲ್ಲಿ ಸ್ಪರ್ಧಿಸಲು ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಆದರೆ ತನ್ನನ್ನು ಹೊರಗಿನಿಂದ ಬಂದವರೆಂದು ಕೆಲವರು ಆಕ್ಷೇಪಿಸುತ್ತಾರೆ. ಆದರೆ ಹೀಗೆನ್ನುವವರು ಗುಜರಾತಿನಿಂದ ಬಂದವರು ಊರವರು ಎನ್ನುತ್ತಾರೆ. ಸ್ವಂತ ಆತ್ಮವನ್ನು ಕೋಮು ಪಕ್ಷಗಳಿಗೆ ಅಡವಿಟ್ಟವರು ಈ ಅಪಪ್ರಚಾರ ನಡೆಸುವುದು ಎಂದು ತೃಣ ಮೂಲ ಕಾಂಗ್ರೆಸ್‍ನಿಂದ ಬಿಜೆಪಿಗೆ ಸೇರ್ಪಡೆಯಾದ ಸುವೇಂದು ಅಧಿಕಾರಿಯವರ ಹೆಸರನ್ನು ಹೇಳದೆಯೇ ಟೀಕಿಸಿದರು.

ಜನರನ್ನು ಒಕ್ಕಲೆಬ್ಬಿಸುವುದರ ವಿರುದ್ಧ ನಂದಿಗ್ರಾಮದಲ್ಲಿ ನಡೆದ ಹೋರಾಟವನ್ನು ಜಾತಿಕಾರ್ಡ್ ಇಟ್ಟು ಅಪಮಾನಿಸುವವರು ಅವರು. ತನ್ನನ್ನು ಹೊರಗಿನವಳು ಎಂದು ಕರೆದಾಗ ಬೆಚ್ಚಿಬಿದ್ದೆ. ನಂದಿಗ್ರಾಮದ ಬಿರ್ಬು ಜಿಲ್ಲೆಯಲ್ಲಿ ನಾನು ಜನಿಸಿದ್ದು. ನನ್ನನ್ನು ಹಾಗೆ ಕರೆದವರು ಇಲ್ಲಿ ಹುಟ್ಟಿಲ್ಲ. ಈಗ ನಾನು ಹೊರಗಿನವಳಾಗಿದ್ದು, ಗುಜರಾತಿಗಳು ಬಂಗಾಳಿಗಳಾಗುತ್ತಿದ್ದಾರೆ ಎಂದು ಸುವೇಂದುರವರ ವಿರುದ್ಧ ಮಮತಾ ಹರಿಹಾಯ್ದರು.

ಇದೇ ವೇಳೆ ನಾಡಿನ ಮಗ ಎಂದು ಕರೆದುಕೊಂಡು ಸುವೇಂದು ಮತ ಯಾಚಿಸುತ್ತಿದ್ದಾರೆ. ನಂದಿಗ್ರಾಮದಲ್ಲಿ 70:30 ಹಿಂದೂ-ಮುಸ್ಲಿಂ ಮತಗಳಿವೆ ಎಂದು ಕೆಲವರು ಪ್ರಚಾರ ಮಾಡುತ್ತಿದ್ದಾರೆಂದು ಮಮತಾ ಆರೋಪಿಸಿದರು. ಆದರೆ ಇಲ್ಲಿ ನಡೆದ ಹೋರಾಟದಲ್ಲಿ ಎಲ್ಲ ವಿಭಾಗಗಳು ಒಟ್ಟಿಗೆ ಸೇರಿದ್ದೆವು ಎಂದು ಅವರು ಹೇಳಿದರು.

ಏಪ್ರಿಲ್ 1ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿಯನ್ನು ಜನರು ಏಪ್ರಿಲ್ ಫೂಲ್ ಮಾಡುವರೆಂದು ಮಮತಾ ಬ್ಯಾನರ್ಜಿ ಹೇಳಿದರು. 2011ರಲ್ಲಿ ನಂದಿಗ್ರಾಮದಿಂದ ಒಕ್ಕಲೆಬ್ಬಿಸುವುದರ ವಿರುದ್ಧ ನಡೆದ ಹೋರಾಟ ದೇಶದ ಗಮನಸೆಳೆದಿತ್ತು. ನಂತರ ಮಮತಾ ಬ್ಯಾನರ್ಜಿ ಪ.ಬಂಗಾಳದಲ್ಲಿ ಅಧಿಕಾರಕ್ಕೆ ಬಂದಿದ್ದರು.