ಮಾಸ್ಕ್ ಧರಿಸಲು ಹೇಳಿದ್ದಕ್ಕೆ ವಿಮಾನದ ಸೀಟಿನಲ್ಲಿಯೇ ಮೂತ್ರ ವಿಸರ್ಜನೆ ಮಾಡಿದ ಯುವಕ

0
812

ಸನ್ಮಾರ್ಗ ವಾರ್ತೆ

ಡೆನ್‍ವರ್, ಮಾ. 16: ಅಮೆರಿಕದ ವಿಮಾನ ಸಿಬ್ಬಂದಿ ಮಾಸ್ಕ್ ಧರಿಸುವಂತೆ ಮನವಿ ಮಾಡಿದಾಗ ಯುವಕನೊಬ್ಬ ವಿಮಾನದ ಸೀಟಿನಲ್ಲಿಯೇ ಮೂತ್ರ ವಿಸರ್ಜನೆಗೈದ ಘಟನೆಯು ಅಲಾಸ್ಕ ಏರ್‌ಲೈನ್ಸ್‌ನಲ್ಲಿ ಮಾ.9 ರಂದು ನಡೆದಿದೆ.

ಅಸಹ್ಯವಾಗಿ ವರ್ತಿಸಿದ್ದಕ್ಕೆ 24 ವರ್ಷದ ಲಾಂಡನ್ ಗ್ರಿಯರ್ ಎಂಬಾತನನ್ನು ಎಫ್‍ಬಿಐ ಪೊಲೀಸರು ಬಂಧಿಸಿ ಡೆನ್‍ವರ್‌ನ ಡಿಸ್ಟ್ರಿಕ್ಟ್ ಕೋರ್ಟಿನಲ್ಲಿ ಹಾಜರುಪಡಿಸಿದ್ದಾರೆ. ಲಾಂಡನ್ ನೀನು ಮಾಸ್ಕ್ ಹಾಕಿಕೊ ಎಂದು ಪದೆ ಪದೇ ಸಿಬ್ಬಂದಿಗಳು ಹೇಳುತ್ತಿದ್ದರು. ಆತ ನಿದ್ದೆ ಮಾಡುತ್ತಿರುವಂತೆ ನಟಿಸುತ್ತಿದ್ದ. ಮಾಸ್ಕ್ ಧರಿಸಲು ಪುನಃ ಹೇಳಲು ಬಂದಾಗ ಈತ ಸೀಟಿನಲ್ಲಿ ಮೂತ್ರ ವಿಸರ್ಜನೆ ಮಾಡಿದನು ಎಂದು ಎಫ್‌ಬಿಐ ಅಧಿಕಾರಿಗಳು ತಿಳಿಸಿದರು.

ಬಟ್ಟೆ ಕಳಚುವುದನ್ನು ನೋಡಿದ ಗಗನ ಸಖಿ ಅದನ್ನು ಹಾಕಿಕೊಳ್ಳಲು ಹೇಳಿದಾಗ ನನಗೆ ಮೂತ್ರ ಮಾಡಬೇಕಿದೆ ಎಂದು ಹೇಳಿದ್ದಾನೆ. ವಿಮಾನ ಹತ್ತುವ ಮೊದಲು ನಾಲ್ಕು ಬಿಯರ್ ಕುಡಿದಿದ್ದೇನೆ. ವಿಮಾನದಲ್ಲಿ ಏನು ಸಂಭವಿಸಿತು ಎಂಬುದು ತನಗೆ ನೆನಪಿಲ್ಲ ಎಂದು ಕೋರ್ಟಿನಲ್ಲಿ ಲಾಂಡನ್ ಹೇಳಿದ್ದಾನೆ. ವಿಮಾನ ಸಿಬ್ಬಂದಿಗೆ ತೊಂದರೆ ಕೊಟ್ಟದ್ದು ಹಾಗೂ ಸೀಟಿನಲ್ಲಿ ಮೂತ್ರ ವಿಸರ್ಜನೆ ಮಾಡಿರುವುದು ಎಲಾಂಡನ್‍ಗೆ ನೆನಪಿಲ್ಲ ಎಂದು ಎಫ್‍ಬಿಐ ಸ್ಪೆಷಲ್ ಏಜೆಂಟ್ ಮಾರ್ಟಿನ್ ಡಾನಿಯಲ್ ಹೇಳಿದರು. 10,000 ಡಾಲರ್ ಬಾಂಡಿನಲ್ಲಿ ಯುವಕನಿಗೆ ಗುರುವಾರ ಜಾಮೀನು ನೀಡಿತು. ಮಾರ್ಚ್ 26ಕ್ಕೆ ಪ್ರಕರಣ ವಿಚಾರಣೆಗೆ ಬರಲಿದ್ದು, ಗರಿಷ್ಠ 20 ವರ್ಷ ಜೈಲು, 2,50,000 ಅಮೆರಿಕನ್ ಡಾಲರ್ ದಂಡ ವಿಧಿಸಬಹುದಾದ ಅಪರಾಧ ಇದು ಎಂದು ಅಸೋಸಿಯೇಟ್ ಪ್ರೆಸ್ ವರದಿ ಮಾಡಿದೆ.