ಸನ್ಮಾರ್ಗ ವಾರ್ತೆ
ನಂದಿಗ್ರಾಮ: ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಮತದಾನದ ವೇಳೆ ಬಿಜೆಪಿ ಪಕ್ಷದ ಕಾರ್ಯಕರ್ತರೊಂದಿಗೆ ನಡೆದಿದ್ದ ಘರ್ಷಣೆಯ ವೇಳೆ ಗಾಯಗೊಂಡಿದ್ದ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಕಳೆದ ವಾರ ನಡೆದ ಘರ್ಷಣೆಯಲ್ಲಿ ಇವರು ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಅವರು ಚಿಕಿತ್ಸೆಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ನಾಲ್ಕನೆ ಹಂತದ ಮತದಾನ ಇಂದು ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿದ್ದು ಎರಡು ಕಡೆ ಅಹಿತಕರ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಕೂಚ್ ಬಿಹಾರ್, ಅಲಿಪುರ ದ್ವಾರ್‍ನಲ್ಲಿ ಹಾಗೂ ಹೌರಾದಲ್ಲಿಯೂ ಘರ್ಷಣೆ ನಡೆದಿದೆ.
ಚುನಾವಣೆಗೆ ಮುಂಚಿತವಾಗಿ 789 ಸಿಆರ್ ಪಿ ಎಫ್ ತುಕಡಿಯನ್ನು ಪಶ್ಚಿಮ ಬಂಗಾಳದಲ್ಲಿ ನಿಯೋಜಿಸಲಾಗಿದೆ.












