ಇಂದು ರಾತ್ರೆಯೊಳಗೆ ದೆಹಲಿಗೆ ಆಕ್ಸಿಜನ್ ಪೂರೈಸಿ- ಕೇಂದ್ರಕ್ಕೆ ಅಂತಿಮ ಎಚ್ಚರಿಕೆ ನೀಡಿದ ಸುಪ್ರೀಂ ಕೋರ್ಟ್

0
517
ಸಾಂದರ್ಭಿಕ ಚಿತ್ರ

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದೆಹಲಿಯಲ್ಲಿ ಕೊರೋನ ಪೀಡಿತರಿಗೆ ಆಕ್ಸಿಜನ್ ಸಿಗದೆ ಸಾವಿನ ಪ್ರಮಾಣವು ಏರಿಕೆಯಾಗುತ್ತಿದ್ದು ಶೀಘ್ರವೇ ಆಕ್ಸಿಜನ್ ತಲುಪಿಸಬೇಕೆಂದು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟು ಎಚ್ಚರಿಕೆ ನೀಡಿದೆ. ಸೋಮವಾರ ಮಧ್ಯರಾತ್ರೆಯೊಳಗೆ ಆಕ್ಸಿಜನ್ ತಲುಪಿಸಬೇಕು. ತುರ್ತು ಹಂತದಲ್ಲಿ ಉಪಯೋಗಿಸಲು ರಾಜ್ಯಗಳೊಂದಿಗೆ ಸಹಕರಿಸಿ ಹೆಚ್ಚಿನ‌ ಪ್ರಮಾಣದಲ್ಲಿ ಆಕ್ಸಿಜನ್ ಸ್ಟಾಕ್ ಇಟ್ಟುಕೊಳ್ಳಬೇಕೆಂದು ಕೋರ್ಟು ಹೇಳಿದೆ.

ಜಸ್ಟಿಸ್ ಡಿ.ವೈ.ಚಂದ್ರಚೂಡ, ಎಲ್.ಎನ್.ರಾವ್, ಎಸ್.ರವೀಂದ್ರ ಭಟ್ಟ್‌ರ ಪೀಠವು ಆಕ್ಸಿಜನ್ ಕೊರತೆ ಪರಿಹರಿಸಲು 64 ಪುಟಗಳ ಆದೇಶವನ್ನು ನೀಡಿದೆ. ಮಕ್ಕಳ ಆಸ್ಪತ್ರೆಯಾದ ಮಧುಕರ್ ರೇನ್‍ಬೊ ಸಹಿತ ದಿಲ್ಲಿಯ ಹಲವು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ತೀವ್ರವಾಗಿದೆ. ಇದಕ್ಕೆ ಕುರಿತ ಅರ್ಜಿಯ ವಾದವನ್ನು ದಿಲ್ಲಿ ಹೈಕೋರ್ಟು ನಿರಂತರ ಆಲಿಸುತ್ತಿದೆ. ಯಾರು ಹೆಚ್ಚು ಕೇಳುವುದಿಲ್ಲ. ಕೇಳಿದ್ದು ಕೊಡದಿದ್ದರೆ ಸೋಮವಾರ ನಿಮ್ಮಿಂದ ವಿವರಣೆ ಪಡಯಲಾಗುವುದು ಎಂದು ಕೇಂದ್ರ ಸರಕಾರಕ್ಕೆ ಹೈಕೋರ್ಟು ಅಂತಿಮ ಎಚ್ಚರಿಕೆ ನೀಡಿದೆ.

ವ್ಯಾಕ್ಸಿನ್ ದರದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ನಡುವೆ ಅಂತರ ಇದ್ದು ಅದು ಪರಿಹರಿಸುವಂತೆ ಕೋರ್ಟು ಹೇಳಿತು. ಶೇ.50ರಷ್ಟು ವ್ಯಾಕ್ಸಿನ್ ರಾಜ್ಯಗಳಿಗೂ ಖಾಸಗಿ ಆಸ್ಪತ್ರೆಗಳಿಗೂ ಮಾರಾಟ ಮಾಡಲು ತಯಾರೆಂದು ವ್ಯಾಕ್ಸಿನ್ ನಿರ್ಮಾತೃಗಳೂ ಕೇಂದ್ರ ಸರಕಾರ ಅನುಮತಿ ನೀಡಿದರೂ ವ್ಯಾಕ್ಸಿನ್ ತಯಾಕರು ಕೇಂದ್ರ ಸರಕಾರಕ್ಕೆ ಕಡಿಮೆ ಬೆಲೆಯಲ್ಲಿ ಮತ್ತು ರಾಜ್ಯ ಸರಕಾರಕ್ಕೆ ಹೆಚ್ಚು ಬೆಲೆಗೂ ಮಾರುತ್ತಿದೆ.