ಪುಣೆಯಲ್ಲಿ ಬ್ಲ್ಯಾಕ್ ಫಂಗಸ್‍ನಿಂದ 25 ಮಂದಿ ಮೃತ: 574 ಮಂದಿಗೆ ರೋಗ

0
580

ಸನ್ಮಾರ್ಗ ವಾರ್ತೆ

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ಬ್ಲ್ಯಾಕ್ ಫಂಗಸ್ ಪೀಡಿತರಾಗಿ ಇದುವರೆಗೆ 25 ಮಂದಿ ಮೃತಪಟ್ಟಿದ್ದು 574 ಮಂದಿಗೆ ರೋಗ ಬಂದಿದೆ ಎಂದು ಪುಣೆ ಜಿಲ್ಲಾಡಳಿತ ತಿಳಿಸಿದೆ. ಕೊರೋನ ಪೀಡಿತರಾಗಿ ಗುಣಮುಖರಾದವರಲ್ಲಿ ಈ ರೋಗ ಕಂಡು ಬಂದಿದೆ. ಪುಣೆ ಮುನ್ಸಿಪಲ್ ಕಾರ್ಪೊರೇಷನ್ ಆರೋಗ್ಯ ತಪಾಸಣೆ ಮಾಡಿಸಿತ್ತು.

500 ಮಂದಿಗೆ ಕರ್ನಾಟಕದಲ್ಲಿ ಬ್ಲ್ಯಾಕ್ ಫಂಗಸ್ ಬಾಧೆ ಕಂಡು ಬಂದಿದೆ ಎಂದು ವರದಿಯಿತ್ತು. ಇದರ ಬೆನ್ನಿಗೆ ಮಹಾರಾಷ್ಟ್ರದ ಲೆಕ್ಕಗಳು ಬಹಿರಂಗವಾಗಿದೆ. ಬೆಂಗಳೂರಿನಲ್ಲಿ ಮಾತ್ರ 250ಕ್ಕೂ ಹೆಚ್ಚು ಮಂದಿಗೆ ಫಂಗಸ್ ಕಂಡು ಬಂದಿದೆ. ಕೊರೋನ ಮುಕ್ತರಾದ ಬಳಿಕ ತೀವ್ರ ತಲೆನೋವು ಮುಖ ಉಬ್ಬಿದಂತಿದ್ದರೆ ಬ್ಲ್ಯಾಕ್ ಫಂಗಸ್ ತಪಾಸಣೆಗೊಳಗಾಗಬೇಕೆಂದು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮುಖ್ಯಸ್ಥ ಡಾ.ರಣದೀಪ್ ಗುಲೇರಿಯಾ ಹೇಳಿದರು.