ವಾಪಾಸು ಕಳುಹಿಸುವುದಕ್ಕಿಂತ ಕೊಂದು ಬಿಡಿ: ಪ್ಲಾಸ್ಟಿಕ್ ಬಾಟ್ಲಿ ಕಟ್ಟಿಕೊಂಡು ಸ್ಪೈನ್‍ಗೆ ಈಜಿ ಬಂದ ಮೊರೊಕ್ಕೊದ ಬಾಲಕನ ಕೂಗು…

0
2173

ಸನ್ಮಾರ್ಗ ವಾರ್ತೆ

ದೇಹದ ಸುತ್ತಲೂ ಪ್ಲಾಸ್ಟಿಕ್ ಬಾಟಲಿಗಳನ್ನು ಕಟ್ಟಿ ಸ್ಪೈನ್‍ಗೆ ಈಜಲು ಯತ್ನಿಸಿದಾಗ ಆ ಬಾಲಕನ ಮನದಲ್ಲಿ ಕೇವಲ ಉತ್ತಮ ಜೀವನದ ಕನಸುಗಳಿದ್ದವು. ಸಿಯೂಟ್‍ನ ಸಮುದ್ರ ತೀರದಲ್ಲಿ ಬಾಲಕನು ಸೆರೆಯಾದಾಗ ಸೈನಿಕರೊಡನೆ ಮರಳಿ ಹೋಗುವುದಕ್ಕಿಂತ ಕೊಲ್ಲುವುದು ಉತ್ತಮ ಎಂದು ಬಾಲಕ ಪೊಲೀಸರಿಗೆ ಹೇಳಿದ್ದಾನೆ. ಯುರೋಪಿಗೆ ಹೋಗಲು ಮೊರೊಕ್ಕದಿಮದ ಈಜುತ್ತಾ ಸಿಯೂಟ್‍ಗೆ ಬಂದಾಗ ಆತ ಬಳಲಿದ್ದ. ವಲಸೆ ನಿಯಂತ್ರಣ ಸ್ಪೈನಿನ ಸೈನಿಕರ ಮುಂದೆ ಆ ಬಾಲಕ ಈಜಿ ದಡ ಹತ್ತಿದ್ದಾನೆ.

ಬಾಲಕ ಬಳಲಿದ್ದನು. ಸೈನಿಕರ ಕೈಗೆ ಸಿಗದಂತೆ ಓಡಿ ಪಾರಾಗಲು ಆತ ಯತ್ನಿಸಿದರೂ ವಿಫಲನಾದನು. ದೇಹಕ್ಕೆ ಕಟ್ಟಿದ್ದ ಪ್ಲಾಸ್ಟಿಕ್ ಬಾಟ್ಲಿಗಳನ್ನು ತೆಗೆದು ಹಾಕಿ ಓಡಿ ಪಾರಾಗಲು ಯತ್ನಿಸಿದ್ದು ನೋಡಿದರೆ ಯಾರ ಕಣ್ಣು ತೇವಗೊಂಡೀತು.

ಸೈನಿಕರು ಹಿಡಿಯುವ ಮೊದಲು ಅತ್ತು ಬೊಬ್ಬೆ ಹೊಡೆದ ಬಾಲಕ ತನ್ನ ಮರಳಿ ಕಳುಹಿಸಬಾರದೆಂದು ಹೇಳಿದ್ದಾನೆ. ಮೊರೊಕ್ಕೊದಿಂದ ಯುರೋಪಿಗೆ ಗಡಿ ದಾಟಲು ಶ್ರಮಿಸುವಾಗ ಹಲವು ಮಂದಿ ಸೆರೆಯಾಗುತ್ತಾರೆ. ಅವರನ್ನು ಸುರಕ್ಷಾ ಕೇಂದ್ರದಲ್ಲಿ ಇರಿಸಲಾಗುತ್ತದೆ. ಅಪ್ರಾಪ್ತರನ್ನು ಮರಳಿಸಲು ಸ್ಪೈನಿನ ಕಾನೂನಿನಲ್ಲಿ ಅವಕಾಶ ಇಲ್ಲ. ಸುರಕ್ಷಾ ಕೇಂದ್ರದಲ್ಲಿ ಹೀಗೆ ಸಿಕ್ಕಿಬಿದ್ದ 8000 ಮಂದಿ ಇದ್ದಾರೆ. ಪ್ಲಾಸ್ಟಿಕ್ ಬಾಟ್ಲಿಯಲ್ಲಿ ಬಂದ ಈ ಬಾಲಕ ಕೂಡ ಇವರಲ್ಲಿ ಒಬ್ಬನಾಗಲಿದ್ದಾನೆ.

 

LEAVE A REPLY

Please enter your comment!
Please enter your name here