ವೈದ್ಯ-ರೋಗಿಯ ಸಂಘರ್ಷ ಶಾಂತಿಪ್ರಿಯ ಜಿಲ್ಲೆಯ ಗೌರವಕ್ಕೆ ಧಕ್ಕೆ ಆಗದಿರಲಿ

0
1240

ಲೇಖನ: ಮನ್ಸೂರ್ ಅಹ್ಮದ್ ಸಾಮಣಿಗೆ

ದಕ್ಷಿಣ ಕನ್ನಡ ಜಿಲ್ಲೆಯನ್ನು ಹಿಂದಿನಿಂದಲೂ ಬುಧ್ಧಿವಂತರ ಜಿಲ್ಲೆ ಹಾಗೂ ಶಾಂತಿಪ್ರಿಯರ ಜಿಲ್ಲೆ ಎಂದು ಕರೆಯಲಾಗುತ್ತದೆ. ಮಾತ್ರವಲ್ಲದೇ ಉನ್ನತ ವೈದ್ಯಕೀಯ ಶಿಕ್ಷಣಕ್ಕಾಗಿ ಅಥವಾ ವೈದ್ಯಕೀಯ ಚಿಕಿತ್ಸೆಗಾಗಿ ಜನರು ಹೊರ ರಾಜ್ಯದಿಂದ ದ.ಕ ಜಿಲ್ಲೆಗೆ ಬರುವುದು ಕೂಡ ಸರ್ವೆ ಸಾಮಾನ್ಯವಾಗಿದೆ. ಆದರೆ ಇತ್ತೀಚೆಗೆ ಕೆಲವೊಂದು ಅಹಿತಕರ ಘಟನೆಗಳು ಜಿಲ್ಲೆಯ ಪ್ರತಿಷ್ಟೆಗೆ ದಕ್ಕೆ ತರುವಂತಾಗಿದೆ.

ಇಂತಹ ಪ್ರಕರಣಗಳಲ್ಲಿ ಸದ್ಯ ಸುದ್ದಿಯಲ್ಲಿರುವ ಖತೀಜ ಜಾಸ್ಮಿನ್ಎಂಬ ಗರ್ಭಿಣಿ ಮಹಿಳೆಯ ಘಟನೆಯ ಸುದ್ದಿಯು ಕೇವಲ ದ.ಕ ಜಿಲ್ಲೆ ಮಾತ್ರ ಅಲ್ಲ ಇಡೀ ಕರ್ನಾಟಕ ರಾಜ್ಯದ್ಯಂತ ಸುದ್ದಿಯಲ್ಲಿದೆ. ಈಗ ಎಲ್ಲರಿಗೂ ತಿಳಿದಿರುವಂತೆ ಕಳೆದ ವರ್ಷದಿಂದ ಜಗತ್ತು ವಿಷಮ ಪರಿಸ್ಥಿತಿಯಲ್ಲಿ ಸಾಗುತ್ತಿದೆ . ಕೋವಿಡ್ ಎಂಬ ಸಾಂಕ್ರಮಿಕ ರೋಗದಿಂದ ಜನ ಸಾಮಾನ್ಯರು ತತ್ತರಿಸುವಂತಾಗಿದೆ. ಇವೆಲ್ಲದರ ನಡುವೆ ಈಗ ಪ್ರತಿ ಆಸ್ಪತ್ರೆಗಳ ವೈದ್ಯರುಗಳು, ದಾದಿಯರು ರಾತ್ರು ಹಗಲೆನ್ನದೆ ತಮ್ಮ ಜೀವದ ಹಂಗು ತೊರೆದು ಕೊರೊನ ರೋಗಿಗಳ ಪಾಲಿಗೆ ವಾರಿಯರ್ಸ್ ಆಗಿ ತಮ್ಮ ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದಾರೆ.

ವೈದ್ಯರು ದೇವರ ಸಮಾನ. ಸಮಾಜದಲ್ಲಿ ವೈದ್ಯ ವೃತ್ತಿಗೆ ಹೆಚ್ಚಿನ ಗೌರವವಿದೆ. ವೈದ್ಯರು ತಮ್ಮ ಪಾಲಿನ ದೇವರು ಎಂಬ ಅಚಲವಾದ ನಂಬಿಕೆ ವಿಶ್ವಾಸವಿದ್ದ ರೋಗಿಗಳಿಗೆ ಇಂದು ಕೆಲವೊಂದು ವೈದ್ಯರ ಅಮಾನವೀಯತೆ ಹಾಗೂ ಇಡೀ ವೈದ್ಯ ಲೋಕವನ್ನು ಸಂಶಯದಿಂದ ನೋಡುವಂತಹ ಪರಿಸ್ಥಿತಿ ಬಂದೊದಗಿದೆ. ಇಂತಹ ಕೆಲವೊಂದು ವೈದ್ಯರಿಂದಾಗಿ ರೋಗಿಗಳೊಂದಿಗೆ ಮಾನವೀಯತೆ ತೋರಿ ನಿಷ್ಟೆಯಿಂದ ದುಡಿಯುವ ಅಸಂಖ್ಯಾತ ವೈದ್ಯರಿಗೆ ಕೆಟ್ಟ ಹೆಸರು ಬರುವಂತಾಗಿದೆ. ಹಾಗೂ ಒಂದಿಬ್ಬರು ವೈದ್ಯರ ಬೇಜವಬ್ದಾರಿತನಕ್ಕಾಗಿ ವೈದ್ಯ ಲೋಕವನ್ನು ದೂಷಿಸುವುದು ಕೂಡ ಸರಿಯಲ್ಲ. ಹೀಗೆಯೆ ವೈದ್ಯರೊಬ್ಬರ ಅಜಾಗರೂಕತೆಯಿಂದ ಇಂದು ಖತೀಜ ಜಾಸ್ಮೀನ್ ಎಂಬ ಯುವತಿಗೆ ಅನ್ಯಾಯವಾಗಿದೆ. ನಾಳೆ ಇನ್ಯಾರಿಗೋ …

ನಮಗೆ ಸಣ್ಣ ಪುಟ್ಟ ಕಾಯಿಲೆ ಬಂದರೂ ವೈದ್ಯರನ್ನು ಭೇಟಿ ಮಾಡಿದಾಗ ಅವರ ಮಾತಿನಿಂದಲೇ ನಮ್ಮ ಅರ್ಧ ಕಾಯಿಲೆ ವಾಸಿಯಾದಂತೆ ಭಾಸವಾಗುತ್ತವೆ.ನಮ್ಮ ದೇಹದ ಆರೋಗ್ಯದಲ್ಲಿ ಹೇರುಪೇರಾದಾಗ ಜೀವನ್ಮರಣದ ನಡುವೆ ಬದುಕಲು ಹೆಣಗಾಡುತ್ತಿರುವಾಗ ನೋವು ಶಮನಗೊಳಿಸಿ, ದೈರ್ಯ ತುಂಬಿ, ಆತ್ಮವಿಶ್ವಾಸ ತುಂಬಿ ಬಾಳಿಗೆ ಬೆಳಕು ನೀಡಿ ಹೊಸ ಜೀವನಕ್ಕೆ ರಹದಾರಿ ಮಾಡಬೇಕಾದ ವೈದ್ಯರು ಕೊರೊನಾ ಪೆೊಸಿಟಿವ್ ಆಗಿ ಜೀವನ್ಮರಣ ಹೋರಾಟದಲ್ಲಿರುವ ರೋಗಿಯ ಮುಂದೆ ಎರಡೂ ಲಂಗ್ಸ್ ಸಂಪೂರ್ಣ ಕೆಟ್ಟು ಹೋಗಿವೆ ಹೊಟ್ಟೆಯಲ್ಲಿ ಮಗು ಸತ್ತಿವೆ ಅಂತ ವೈದ್ಯರು ಹೇಳುವಾಗ ರೋಗಿಯ ಸ್ಥಿತಿ ಹೇಗಿರಬವುದು ನೀವೇ ಯೋಚಿಸಿ.ಅದರಲ್ಲೂ 8 ತಿಂಗಳ ಗರ್ಬಿಣಿ ಬೇರೆ.ವೈದ್ಯರು ಮತ್ತು ರೋಗಿಯ ನಡುವೆ ಸಂಬಂಧ ಎಂದೂ ನಂಬಿಕೆಯ ಬುನಾದಿಯಲ್ಲಿರಬೇಕು .ಆದರೆ ಈ ದಿನಗಳಲ್ಲಿ ವೈದ್ಯ ವೃತ್ತಿಯೂ ವ್ಯಾಪರೀಕರಣವಾಗಿರುದರಿಂದ ವೈದ್ಯ ಮತ್ತು ರೋಗಿಯ ನಡುವೆ ಮಾನವೀಯ ಸಂಬಂಧಗಳು ನಶಿಸಿ ಹೋಗುತ್ತಿವೆ.

ವೈದ್ಯ ಮತ್ತು ರೋಗಿಗಳ ಸಂಬಂಧ ಅಳಿಸಲಾಗದ ಸಂಬಂಧ. ಇಲ್ಲಿ ರೋಗಿಯು ರೋಗ ಬಂದಾಗ ವೈದ್ಯರು ಬದುಕಲಾರ, ವೈದ್ಯರು ರೋಗಿಗಲಿಲ್ಲದೆ ಜೀವನ ಸಾಗಿಸಲು ಸಾಗಿಸಲಾರ. ವೈದ್ಯಕೀಯ ಸೇವೆ ಅವರ ವೃತ್ತಿ. ಒಬ್ಬ ರೋಗಿಗೆ ಬೇರೆ ಬೇರೆ ವೈದ್ಯರುಗಳು ಚಿಕಿತ್ಸೆಗೆ ದೊರೆಯ ಬಹುದು. ಅಂತೆಯೇ ಒಬ್ಬ ವೈದ್ಯರಿಗೆ ಬೇರೆ ಬೇರೆ ರೋಗಿಗಳು ಸಿಗಬವುದು. ವಿಷಯ ಅದಲ್ಲ ಆ ಯುವತಿಯು ಕೇವಲ ಒಬ್ಬ ಕೊರೋನ ಪಾಝಿಟಿವ್ ಆಗಿದ್ದಾರೆಂಬ ಕಾರಣಕ್ಕಾಗಿ ಆ ಗೈನಾಕಾಲಜಿಸ್ಟ್ ಪ್ರಿಯಾ ಬಲ್ಲಾಳ್ ಆಕೆಯೊಂದಿಗೆ ನಡೆದ ರೀತಿ ವೈದ್ಯರಿಗೆ ಶೊಭೆ ತರುವಂತದಲ್ಲ .

ತನ್ನ ಹಾಗೂ ತನ್ನ ಮಗುವಿನ ಜೀವ ರಕ್ಷಣೆಗಾಗಿ ಸಂತ್ರಸ್ತೆ ಜಾಸ್ಮೀನ್ ಕುಟುಂಬಸ್ತರೊಂದಿಗೆ ಹೈಲಾಂಡ್ ಅಥೆನಾ KMC ಮಂಗಳ ,ವೆನ್ ಲಾಕ್ ಲೇಡಿಗೋಷನ್ ,ಸಿಟಿ ಆಸ್ಪತ್ರೆ ಹೀಗೆ ಏಳೆಂಟು ಆಸ್ಪತ್ರೆಗಳಿಗೆ ಸುತ್ತಾಡಿ ಬಳಲಿ ಹೋಗಿದ್ದಾರೆ. ಎಲ್ಲ ಕಡೆಯೂ ಮೊದಲು ಆಡ್ಮಿಟ್ ಮಾಡಿ ಎಂದು ಹೇಳಿದ ವೈದ್ಯರು ನಂತರ ಡಾ.ಪ್ರಿಯಾ ಬಳ್ಳಾಲರನ್ನು ಸಂಪರ್ಕಿಸಿದ ನಂತರ ಇಲ್ಲಿ ಬೆಡ್ ಇಲ್ಲ ಡೆಲಿವರಿಗೆ ವ್ಯವಸ್ಥೆ ಇಲ್ಲ ಎಂದೆಲ್ಲ ಹೇಳಿ ಕೈ ಚೆಲ್ಲಿ ಹಿಂದೆ ಕಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಹಾಗೂ ಹೀಗೂ ಓಡಾಡಿ ಕೊನೆಗೂ ಆ ಯುವತಿಗೆ ಲೇಡಿಗೋಶನ್ ಅಸ್ಪತ್ರೆ DHO ಕಿಶೋರ್ ಕುಮಾರ್ ಅವರನ್ನು ಮನಹೊಲಿಸಿ ರೋಗಿಯನ್ನು ಕೊಡಲೇ ಯುವ ಡಾಕ್ಟರ್ ಗಳಾದ ಡಾ:ಶಾರಣ್ ಮತ್ತು ಡಾ: ಶ್ರದ್ದಾ ಹಾಗೂ ಡಾ. ಸದಾಶಿವ್ DMO ಹಾಗೂ ತಂಡ ಯಶಸ್ವಿಯಾಗಿ ಸಿಸೇರಿಯನ್ ಮಾಡಿ ಮಗು ತಾಯಿಯ ಪ್ರಾಣ ಉಳಿಸಿದರು. ಈ ಸನ್ನಿವೇಶದಲ್ಲಿ ಜೀವನ್ಮರಣ ಹೋರಾಟದಲ್ಲಿದ್ದ ಜಾಸ್ಮೀನ್ ಗೆ ಸಿಸೇರಿಯನ್ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ತಾಯಿಮಗುವಿನ ಪ್ರಾಣರಕ್ಷಣೆ ಮಾಡಿದ್ದು, ಜಾಸ್ಮೀನ್ ಅಲೆದಾಡಿದ ನಗರದ ಪ್ರತಿಷ್ಟಿತ ಆಸ್ಪತ್ರೆಗಳ ಪ್ರಸಿದ್ದ ಡಾಕ್ಟರ್ ಗಳು ಜಾಸ್ಮೀನ್ ಗೆ ಅನ್ಯಾಯ ಮಾಡಲಾಗಿದೆ ಎಂಬುದಕ್ಕೆ ಹಿಡಿದ ಕೈಗನ್ನಡಿಯಲ್ಲವೇ….? ಹಾಗಾದರೆ ಅಲ್ಲಿ ಜಾಸ್ಮೀನ್ ಳನ್ನು ಸುಖಾಸುಮ್ಮನೆ ಹೆದರಿಸಲಾಯಿತೇ…?ಯಾಕಾಗಿ ಮಂಗಳ ಆಸ್ಪತ್ರೆಯ ಡಾ ಜಯಪ್ರಕಾಶ್ ಅರ್ಧ ರೀತ್ರಿಯಲ್ಲಿ ರೋಗಿಯ ಕುಟುಂಬಸ್ಥರನ್ನು ಕರೆದು ಮಗು ಹೊಟ್ಟೆಯಲ್ಲಿ ತೀರಿಕೋಂಡಿದೆ ತಾಯಿಯೂ ಕೆಲವೊಂದು ಘಂಟೆಯಷ್ಟೆ ಬದುಕಿರುತ್ತಾಳೆ ಎಂದು ಹೇಳಿದರು…?ಅಷ್ಟಕ್ಕೂ ಕೊರೊನಾ ಸೊಂಕಿಗೆ ತುತ್ತಾಗಿ ಜೀವನ್ಮರಣ ಹೋರಾಟದಲ್ಲಿದ್ದ ಜಾಸ್ಮೀನ್ ಇಷ್ಟೆಲ್ಲಾ ಆಸ್ಪತ್ರೆ ಅಲೆದಾಡಿದ್ದರುೂ ದೃತಿಗೆಡದೆ ದೈರ್ಯದಿಂದ ಇದ್ದು ಸಿಸರಿನ್ ಆದ ಮೇಲೆ ಡಾಕ್ಟರ್ ಮುರಳಿಧರ್ ಬಂದು ನೀನು ಇಲ್ಲಿದ್ದೀಯಾ ನೀನು ಎಲ್ಲೆಲ್ಲಿ ಸುತ್ತಾಡುಕೊಂಡು ಇಲ್ಲಿಗೆ ಬಂದಿದ್ದೀಯಲ್ವಾ ನೀನು ಹೆಚ್ಚು ಸಮಯ ಬದುಕುವುದಿಲ್ಲ, ನೀನು ಮೂರೇ ದಿವಸ ಬದುಕುವುದು ಎಂದು ಗಧರಿಸಿದ್ದಾರೆಂದು ಸುಳ್ಳು ಹೇಳಲು ಸಾಧ್ಯವೇ….?ಇವೆಲ್ಲವೂ ಉತ್ತರ ಸಿಗದ ಯಕ್ಷ ಪ್ರಶ್ನೆಯಾಗಿದೆ.

ಸಾಮಾನ್ಯವಾಗಿ ತಮ್ಮ ತಮ್ಮ ಕುಟುಂಬದ ಸದಸ್ಯರಿಗೆ ಡಾಕ್ಟರುಗಳಿಂದ ಅನ್ಯಯಗಳಾದಾಗ ರೋಗಿಯ ಕುಟುಂಬಸ್ತರು ಕೆಲವೊಮ್ಮೆ ಅತಿರೇಕಕ್ಕೊಳಗಾಗಿ ಡಾಕ್ಟರುಗಳನ್ನು ತರಾಟೆಗೆ ತೆಗೆದುಕ್ಕೊಂಡಿರುದನ್ನು ನಾವು ಅದೆಷ್ಟೋ ಸಲ ಕಂಡಿದ್ದೀವಿ ಕೇಳಿದ್ದೀವಿ ಅದೇ ಇಲ್ಲಿಯೂ ನಡೆದಿರವುದು. ಇದು ಮೊದಲ ಸಲ ಅಲ್ಲ ಇಂತಹ ಹಲವಾರು ಘಟನೆಗಳು ಈ ಕೊರೊನಾ ಸಂದರ್ಬದಲ್ಲೂ ಅದೆಷ್ಟೋ ಪ್ರಕರಣಗಳು ಇಡೀ ರಾಜ್ಯದಲ್ಲಿ ನಡದಿರೋದು ನಮ್ಮ ಕಣ್ಣ ಮುಂದೆ ಇದೆ.
ಆದೇ ಇಲ್ಲಿಯೂ ನಡೆದಿರೋದು. ಆದರೆ ಇಲ್ಲಿ ಯಾರೇ ಒಂದಿಬ್ಬರು ಮಾಡಿದ ತಪ್ಪುಗೆ ಇಡೀ ಕುಟುಂಬವನ್ನೇ ಹೋಣೆಗಾರರನ್ನಾಗಿ ಮಾಡುವುದರ ಪರಿ ಡಾಕ್ಟರುಗಳು ತಮ್ಮ ತಪ್ಪುಗಳನ್ನು ಮರೆಮಾಚಲು ಷಡ್ಯಂತ್ರ ಮಾಡಲಾಗಿದೆಯೇ ಎಂಬ ಅನುಮಾನಕ್ಕೆ ಕಾರಣವಾಗಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ವಿಷಯ ಏನಿದ್ದರೂ ಡಾಕ್ಟರುಗಳಿಂದ ತಪ್ಪು ನಡೆದಿದೆ ಎಂಬುದು ಎಷ್ಟು ಸತ್ಯವೋ ಇಲ್ಲಿ ಇನ್ನೊಂದು ತಪ್ಪು ನಡೆದಿದೆ ಎಂಬುದು ಅಷ್ಟೇ ಸತ್ಯ. ಇಲ್ಲಿ ಮೋದಲ ತಪ್ಪು ನಡೆಯದೇ ಹೊಗಿದ್ದರೆ ಎರಡನೇ ತಪ್ಪಿಗೆ ಅವಕಾಶವೇ ಇರುತ್ತಿರಲ್ಲವೆಂಬುದು ಬುದ್ದಿವಂತ ಜಿಲ್ಲೆಯ ಬುದ್ದಿವಂತರು ತಿಳಿದುಕೊಳ್ಳಬೇಕಾದ ನಗ್ನ ಸತ್ಯವಾಗಿದೆ. ಕೇವಲ ಪ್ರತಿಷ್ಠೆಗಾಗಿ ವೈದ್ಯರುಗಳು ಸಂತ್ರಸ್ಥೆಯ ಇಡೀ ಕುಟುಂಬವನ್ನೇ ಹೆದರಿಸಿ ಬೆದರಿಸಿ ತಮ್ಮ ತಪ್ಪನ್ನು ಮರಮಮಾಚಲು ಪ್ರಯತ್ನಿಸಿದರೆ ಸದ್ರಿ ವೈದ್ಯರುಗಳ ವೃತ್ತಿ ಜೀವನದ ಮೇಲೆ ಎಷ್ಚು ಪರಿಣಾಮ ಬೀಳಬಹುದು ಎಂಬುದನ್ನು ವಿಧ್ಯಾವಂತ ವೈದ್ಯರುಗಳು ತಿಳಿದುಕೊಳ್ಳಲೇಬೇಕಾಗಿದೆ. ವೈದ್ಯರೂ ಆತ್ಮ ವಿಮರ್ಶೆ ಮಾಡಿಕೊಂಡು ತಮ್ಮ ವೈದ್ಯಕೀಯ ವೃತ್ತಿಯನ್ನು ಪಾಲಿಸಿದಲ್ಲಿ ಸುಂದರ ಸುದೃಢ ಸಮಾಜ ನಿರ್ಮಾಣವಾಗಬಹುದು. ಈಗಿರುವ ಕಾಲಘಟ್ಟದಲ್ಲಿ ರೋಗಿಗಳು ವೈದ್ಯರಿಲ್ಲದೆ ಬದುಕಬಹುದು. ಆದರೆ ವೈದ್ಯರು ರೋಗಿಗಳಿಲ್ಲದೆ ಬದುಕುವುದು ಅಸಾಧ್ಯ ಎಂಬ ಮಾತು ಬಂದರೆ ಅತಿಶಯೋಕ್ತಿಯಲ್ಲ. ಪ್ರಜ್ಞಾವಂತರಾದ ನಾವು ಉರುಯುವ ಬೆಂಕಿಗೆ ತುಪ್ಪ ಸುರಿಯುದರ ಬದಲಾಗಿ, ನೀರು ಸುರಿಯುವ ಕೆಲಸ ಮಾಡಬೇಕಾಗಿದೆ. ತಪ್ಪು ಮಾಡುದು ಸಹಜ ಆದರೆ ತಿದ್ದಿ ನಡೆಯೊದು ಮನುಜ ಎಂಬಂತ್ತೆ ಇಲ್ಲಿ ತಪ್ಪುಗಳು ನಡೆದುಹೋಗಿವೆ.ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ.

ಮಾನ್ಯ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರ ಬಗ್ಗೆ ನನಗೆ ಅಪಾರವಾದ ಗೌರವ ನಂಬಿಕೆ ಇದೆ. ಅವರೊಬ್ಬ ಧಕ್ಷ ಯುವ ಡೈನಾವಿಕ್ ಪೊಲೀಸ್ ಅಧಿಕಾರೀಯೂ ಕೂಡ. ಮಾನ್ಯ ಜಿಲ್ಲಾಧಿಕಾರಿಯಾದ ಡಾ: ರಾಜೇಂದ್ರ ಕೆ. ವಿ ಅವರು ಕೊರೊನಾ ಸಂಕಷ್ಟದಲ್ಲಿರುವ ದ.ಕ ಜಿಲ್ಲೆಯನ್ನು ಮುನ್ನೆಡೆಸಿದ ರೀತಿ ಲಾಕ್ಡೌನ್ ಸಂದರ್ಭದಲ್ಲಿ ಅವರು ಕೈಗೊಂಡ ಕ್ರಮಗಳು ಪ್ರಶಂಸನೀಯ.ಮಾನ್ಯ ಜಿಲ್ಲಾಧಿಕಾರಿ ಡಾ: ರಾಜೇಂದ್ರ ಹಾಗೂ ಮಾನ್ಯ ಪೊಲೀಸ್ ಕಮಿಷನರ್ ಶಶಿ ಕುಮಾರ್ ಈ ಘಟಣೆಯ ಬಗ್ಗೆ ಗಂಭೀರ ಮುತುವರ್ಜಿ ವಹಿಸಿ ಕೂಲಂಕುಷವಾಗಿ ತನಿಖೆ ನಡೆಸಿ ಬುದ್ದಿವಂತರ ಜಿಲ್ಲೆ ಶಾಂತಿ ಪ್ರಿಯ ಜಿಲ್ಲೆ ಎಂದೆಲ್ಲಾ ಕರೆಯಲ್ಪಡುವ ದ.ಕ ಜಿಲ್ಲೆಯ ಘನತೆ ಗೌರವಕ್ಕೆ ಧಕ್ಕೆಯಾಗದ ರೀತಿಯಲ್ಲಿ ಇನ್ನು ಇಂತಹ ಘಟನೆಗಳು ಮರುಕಳಿಸದಂತೆ ನಿರ್ದಿಷ್ಟ ಕ್ರಮ ಕೈಗೊಂಡು ಈ ಪ್ರಕರಣದ ಸತ್ಯಾಸತ್ತತೆಯನ್ನು ಅರಿತು ಅಂತಿಮ ತೆರೆ ಎಲೆದು ನಮ್ಮ ಜಿಲ್ಲೆಯ ಘನತೆ ಗೌರವವನ್ನು ಉಳಿಕೊಳ್ಳುತ್ತಾರೆ ಎಂಬುದು ನನ್ನ ಅಂಬೋಣ.

ಮನ್ಸೂರ್ ಅಹ್ಮದ್ ಸಾಮಣಿಗೆ
( ಅಧ್ಯಕ್ಷರು )
ಬ್ಯಾರಿ ಬರಹಗಾರರು ಮತ್ತು ಕಲಾವಿದರ ಕೂಟ