ಉತ್ತರ ಪ್ರದೇಶದ ಮಸೀದಿ ಧ್ವಂಸದ ಬಗ್ಗೆ ವೀಡಿಯೊ ಡಾಕ್ಯುಮೆಂಟರಿ: ವಯರ್ ವಿರುದ್ಧ ಪ್ರಕರಣ ದಾಖಲಿಸಿದ ಯುಪಿ ಪೊಲೀಸರು

0
712

ಸನ್ಮಾರ್ಗ ವಾರ್ತೆ

ಲಕ್ನೊ: ಗಾಝಿಯಾಬಾದ್‍ನಲ್ಲಿ ಮುಸ್ಲಿಮ್ ವಯೋವೃದ್ಧನಿಗೆ ಕ್ರೂರವಾಗಿ ಥಳಿಸಿ ಜೈ ಶ್ರೀರಾಮ್ ಎಂದು ಹೇಳಲು ಬಲವಂತಪಡಿಸಿದ ಬಗ್ಗೆ ಕೇಸು ದಾಖಲಿಸಿದ ಬೆನ್ನಿಗೆ ಮಾಧ್ಯಮಗಳ ವಿರುದ್ಧ ಪುನಃ ಉತ್ತರ ಪ್ರದೇಶ ಪೊಲೀಸರು ಕೇಸು ದಾಖಲಿಸಿಕೊಂಡಿದಾರೆ. ಉತ್ತರ ಪ್ರದೇಶದ ಬಾರಬಂಕಿಯಲ್ಲಿ ಮಸೀದಿ ಧ್ವಂಸ ಮಾಡಿದ ಘಟನೆಯ ಕುರಿತ ವೀಡಿಯೊ ಡಾಕ್ಯುಮೆಂಟರಿ ತಯಾರಿಸಿ ತನ್ನ ಟ್ವಿಟರ್ ಹ್ಯಾಂಡಲಿನಲ್ಲಿ ವಯರ್ ಆನ್‍ಲೈನ್ ಪೋರ್ಟಲ್‍ನಲ್ಲಿ ಶೇರ್ ಮಾಡಿದ್ದಕ್ಕಾಗಿ ಪೊಲೀಸರು ಕೇಸು ಹಾಕಿದ್ದಾರೆ.

ಗಾಝಿಯಾಬಾದ್ ಘಟನೆಯಲ್ಲಿಯೂ ವಯರ್ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿತ್ತು. ವಿದ್ವೇಷ ಹರಡಿದ್ದು, ಗಲಭೆ ಯತ್ನ ಆರೋಪಿಸಿ ಕೇಸು ದಾಖಲಾಗಿದ್ದು ಮಸೀದಿಯಲ್ಲಿ ಪವಿತ್ರ ಗ್ರಂಥವನ್ನು ಮಲಿನಗೊಳಿಸಿ ಚರಂಡಿಗೆ ಹಾಕಲಾಗಿದೆ ಎಂದು ಡಾಕ್ಯುಮೆಂಟರಿಯಲ್ಲಿ ಆರೋಪಿಸಲಾಗಿದೆ. ಆದರೆ ಹೀಗೆ ಆಗಿಲ್ಲ ಎಂದು ಬಾರಬಂಕಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದರ್ಶ ಸಿಂಗ್ ಹೇಳಿದ್ದಾರೆ.

ವಯರ್ ಮೆಗಝಿನ್‍ಗಾಗಿ ಡಾಕ್ಯುಮೆಂಟರಿ ತಯಾರಿಸಿದ ಇಬ್ಬರು ಪತ್ರಕರ್ತರ ವಿರುದ್ಧ ಕೇಸು ದಾಖಲಿಸಲಾಗಿದೆ. ಆದರೆ ವಯರ್ ಬೆದರಿಸುವ ಯತ್ನದಿಂದ ಪ್ರಯೋಜನವಿಲ್ಲ. ಈ ಹಿಂದೆಯೂ ಉತ್ತರ ಪ್ರದೇಶ ಪೊಲೀಸರು ವಿವಿಧ ಘಟನೆಗಳಲ್ಲಿ ಕೇಸು ದಾಖಲಿಸಿಕೊಂಡಿದ್ದರು. ಆ ಕೇಸುಗಳಂತೆ ನಿರಾಧಾರ ಪ್ರಕರಣ ಎಂದು ಪೋರ್ಟಲ್ ಎಡಿಟರ್ ಸಿದ್ಧಾರ್ಥ ವರದರಾಜನ್ ಹೇಳಿದರು.

ಮಸೀದಿ ಕೆಡವಿದ ಪ್ರಕರಣದ ವಿರುದ್ಧ ಸುನ್ನಿ ವಕ್ಫ್ ಬೋರ್ಡಿನ ದೂರಿನಲ್ಲಿ ಅಲಾಹಾಬಾದ್ ಹೈಕೋರ್ಟ್ ಉತ್ತರಪ್ರದೇಶ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಉತ್ತರ ಪ್ರದೇಶ ಸುನ್ನಿ ವಕ್ಫ್ ಬೋರ್ಡಿನಲ್ಲಿ ಮಸೀದಿ ನೋಂದಾವಣೆಯಾಗಿತ್ತು. ಮಾಧ್ಯಮ ಸ್ವಾತಂತ್ರ್ಯದಲ್ಲಿ ನಂಬಿಕೆಯಿಲ್ಲದ ಆದಿತ್ಯನಾಥ ಸರಕಾರ ರಾಜ್ಯದಲ್ಲಿ ಕೆಲಸ ಮಾಡುವ ವರದಿಗಾರರ ಕಾರ್ಯವನ್ನು ಅಪರಾಧವನ್ನಾಗಿ ಬದಲಾಯಿಸುತ್ತಿದೆ. ಉತ್ತರ ಪ್ರದೇಶ ರಾಜಕೀಯ ನಾಯಕರು ಸಮಾಜ ವಿರೋಧಿ ಶಕ್ತಿಗಳು ತೀವ್ರ ಸಾಮುದಾಯಿಕ ದ್ವೇಷ ಹರಡುತ್ತಿದ್ದಾರೆ. ಅಕ್ರಮಕ್ಕೆ ಪ್ರೋತ್ಸಾಹಿಸುತ್ತಿದ್ದಾರೆ. ಅದು ಯಾವುದೋ ಸಾಮಾಜಿಕ ಸೌಹಾರ್ದಕ್ಕೋ ಕಾನೂನು ವ್ಯವಸ್ಥೆಗೋ ಬೆದರಿಕೆಯೆಂದು ಪೊಲೀಸರ ತಿಳಿದುಕೊಂಡಿಲ್ಲ ಎಂದು ವರದರಾಜನ್ ಆರೋಪಿಸಿದರು. ಗಾಝಿಯಾಬಾದ್ ಹಲ್ಲೆ ಘಟನೆಯಲ್ಲಿ ವಯರ್ ಮತ್ತು ಹಿರಿಯ ಪತ್ರಕರ್ತ ರಾಣಾ ಅಯ್ಯೂಬ್, ಸಬಾ ನಕ್ವಿಯ ವಿರುದ್ಧ ಕಳೆದವಾರ ಉತ್ತರ ಪ್ರದೇಶ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.