ಇಸ್ರೇಲ್‍ನಲ್ಲಿ ಹೆಚ್ಚಿದ ಆತ್ಮಹತ್ಯೆ ಘಟನೆಗಳು

0
1216

ಟೆಲ್‍ಅವೀವ್: ಇಸ್ರೇಲಿನಲ್ಲಿ ಆತ್ಮಹತ್ಯಾ ದರ ಹೆಚ್ಚಳವಾಗಿದೆ ಎಂದು ವರದಿ ಯಾಗಿದೆ.2016ರ ಬಳಿಕ ಆತ್ಮಹತ್ಯೆ ಹೆಚ್ಚಳವಾಗಿದೆ ಎಂದು ಕಳೆದ ದಿವಸ ಇಸ್ರೇಲಿನ ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿದ ವರದಿಯಲ್ಲಿ ವಿವರಿಸಲಾಗಿದೆ.390 ಮಂದಿ ಆತ್ಮಹತ್ಯೆಗೆ ಯತ್ನಿಸಿದ್ದು, ಇವರಲ್ಲಿ 321 ಮಂದಿ ಪುರುಷರು ಮತ್ತು 69 ಮಹಿಳೆಯರಿದ್ದಾರೆ.2015ರಲ್ಲಿ ಇದು 342 ಆಗಿತ್ತು. ಆದ್ದರಿಂದ ಆತ್ಮಹತ್ಯೆಯ ದರ ಶೇ5.6ಕ್ಕೇರಿಕೆಯಾಗಿದೆ ಎಂದು ವರದಿ ತಿಳಿಸಿದೆ. 25 ವರ್ಷದಿಂದ 64 ವರ್ಷ ವಯಸ್ಸಿನ ವರೆಗಿನ ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

2016ರಲ್ಲಿ 6527 ಮಂದಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದು ಭಯಾನಕ ಸ್ಥಿತಿಯಾಗಿದೆ. ಇವರೆಲ್ಲರೂ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಮತ್ತು ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಾಗಿದ್ದರು. 2017ರಲ್ಲಿ 6731 ಮಂದಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. 2017ರಲ್ಲಿ 17 ವರ್ಷದಿಂದ ಕೆಳ  ವಯೋಮಾನದ 861 ಮಕ್ಕಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಇವರಲ್ಲಿ 14 ವರ್ಷಕ್ಕಿಂತ ಕೆಳ ವಯೋಮಾನದ 292 ಗಂಡು ಮಕ್ಕಳು ಸೇರಿದ್ದಾರೆ.