ಭಾರತವು ಹಿಂದೂಗಳಿಗೆ ಮಾತ್ರ ಇದೆ ಎಂದು ಈ ಹಿಂದೆ ಹೇಳಿಕೆ ಕೊಟ್ಟಿದ್ದ ಮತ್ತು ಗೋವುಗಳನ್ನು ಗೌರವಿಸದವರ ಕೈ ಕಾಲು ಮುರಿಯುವೆ ಎಂದು ಬೆದರಿಕೆ ಹಾಕಿದ್ದ ಉತ್ತರ ಪ್ರದೇಶದ ಬಿಜೆಪಿ ಶಾಸಕ ವಿಕ್ರಂ ಸೈನಿಯವರು ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಭಾರತದಲ್ಲಿ ಅಸಹಿಷ್ಣುತೆಯಿದೆ ಮತ್ತು ಭಾರತವು ಸುರಕ್ಷಿತವಲ್ಲ ಎನ್ನುವವರ ಮೇಲೆ ಬಾಂಬ್ ಹಾಕಬೇಕು ಎಂದಿದ್ದಾರೆ.
ನನಗೊಂದು ಸಚಿವ ಸ್ಥಾನ ನೀಡಿದರೆ ನಾನು ದೇಶ ಸುರಕ್ಷಿತವಲ್ಲ ಅನ್ನುವವರ ಮೇಲೆ ಬಾಂಬ್ ಹಾಕುವೆ ಎಂದೂ ಅವರು ಹೇಳಿದ್ದಾರೆ.
ಯಾರು ಅಸುರಕ್ಷಿತತೆಯ ಮಾತಾಡುತ್ತಾರೋ ಅವರಿಗೆ ರಾಷ್ಟ್ರೀಯತೆಯ ಕೊರತೆ ಇದೆ ಎಂದು ಅರ್ಥ. ಅಂಥವರು ತಾವು ಸುರಕ್ಷಿತರೆಂದು ಭಾವಿಸುವ ರಾಷ್ಟ್ರಕ್ಕೆ ಹೋಗಬಹುದು ಎಂದವರು ಹೇಳಿದ್ದಾರೆ.












