ನಿನ್ನೆ ಸುಖ, ಇವತ್ತು ದುಃಖ, ಬದುಕು ಇಷ್ಟೇ…

0
923

ಏ ಕೆ ಕುಕ್ಕಿಲ

ಕೇರಳದ ಆ ಇಂಜಿನಿಯರ್ ವಿದ್ಯಾರ್ಥಿ ತನ್ನೊಳಗನ್ನು ತೆರೆದಿಡುತ್ತಾ ಹೋದ…

ಅಪ್ಪ ಗಲ್ಫ್ ನಲ್ಲಿ. ಮನೆಯಲ್ಲಂತೂ ತುಂಬು ಸಂತಸದ ಬದುಕು. ತಾಯಿ, ಇಬ್ಬರು ಅಕ್ಕಂದಿರು ಮತ್ತು ಈತನಿರುವ ಅನುಕೂಲಸ್ಥ ಕುಟುಂಬ. ಅಕ್ಕನಿಗೆ ಮದುವೆಯಾಯಿತು. ಹೀಗಿರುತ್ತಾ ಅಪ್ಪನಿಗೆ ಅಲ್ಜೈಮರ್ ಕಾಯಿಲೆ ಬಾಧಿಸಿತು. ಸಂತಸದ ಮನೆ ದುಃಖದ ಮನೆಯಾಗಿ ಪರಿವರ್ತಿತವಾಯಿತು. ಅನುಕೂಲಸ್ಥ ಕುಟುಂಬ ಎಂಬ ಗುರುತು ಕಳೆಗುಂದತೊಡಗಿತು. ಇದರ ನಡುವೆ ತಿಂಗಳುಗಳ ಹಿಂದೆ ಅಪ್ಪಳಿಸಿದ ಪ್ರವಾಹವೂ ಇವರ ಮನೆಯನ್ನು ಹುಡುಕಿಕೊಂಡು ಬಂದು ಹಾನಿಯನ್ನು ಉಂಟುಮಾಡಿ ಹೊರಟುಹೋಯಿತು. ಈಗ ಅಪ್ಪ ಮನೆಯಲ್ಲಿ. ಅವರಿಗೆ ಯಾವುದರ ಜ್ಞಾಪಕವೂ ಇಲ್ಲ. ಅಮ್ಮ ಅವರ ಆರೈಕೆಯಲ್ಲಿ. ಸಲೀಸಾಗಿ ನಡೆದು ಹೋಗಿದ್ದ ಅಕ್ಕನ ಮದುವೆಯಂತೆ ಈಗ ತಂಗಿಯ ಮದುವೆ ನಡೆಯುವ ಹಾಗಿಲ್ಲ. ಲಕ್ಷ ಲಕ್ಷ ವರದಕ್ಷಿಣೆಯ ಬೇಡಿಕೆ. ಅಪ್ಪ ಗಲ್ಫಲ್ಲಿರುವಾಗ ಲಕ್ಷ ಎಂಬುದು ಸಣ್ಣ ಮೊತ್ತವಾಗಿತ್ತು. ಈಗ ಅದು ತುಂಬಾ ದೊಡ್ಡದು. ಮನೆಯನ್ನು ಮಾರಿ ಮದುವೆ ಮಾಡುವ ಯೋಚನೆ ಕುಟುಂಬದ್ದು….

ಆಲಿಸುತ್ತಾ ಆಲಿಸುತ್ತಾ ನಾನು ತಣ್ಣಗಾಗಿ ಹೋದೆ. ಆಘಾತವಾಗಿರುವುದು ಅಪ್ಪನ ಒಂದು ನರಕ್ಕೆ. ಆದರೆ, ಅದರ ಪರಿಣಾಮವನ್ನು ಒಂದಿಡೀ ಕುಟುಂಬವೇ ಅನುಭವಿಸುತ್ತಿದೆ. ನಿನ್ನೆ ಸುಖ. ಇವತ್ತು ದುಃಖ.

ಬದುಕು ಇಷ್ಟೇ…