ಸನ್ಮಾರ್ಗ ವಾರ್ತೆ
ಲಂಡನ್: ಮನುಷ್ಯನ ಮೂತ್ರವನ್ನು ಉಪಯೋಗಿಸಿ ಮೊಬೈಲ್ ಫೋನ್ ಚಾರ್ಜ್ ಮಾಡಬಹುದು ಎಂದು ಟನ್ನ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಬ್ರಿಟನ್ನ ಬ್ರಸ್ಟೊಲ್ನ ವಿಜ್ಞಾನಿಗಳು ಮೈಕ್ರೋ ಬಯಲ್ ಫ್ಯೂಯಲ್ ಸೆಲ್ಸ್ ಉಪಯೋಗಿಸಿ ಮೂತ್ರದಿಂದ ಶಕ್ತಿ ಇಂಧನ ಕಂಡು ಹುಡುಕಿದ್ದಾರೆ.
ಮೂತ್ರದಿಂದ ಶಕ್ತಿ ಪ್ರತ್ಯೇಕಿಸುವ ಸೂಕ್ಷ್ಮಾಣುಗಳನ್ನು ಕಂಡು ಹಿಡಿದು ಉಪಯೋಗಿಸಲಾಗಿದೆ. ಎರಡು ವರ್ಷದ ಹಿಂದೆ ಗ್ಲಾಸ್ಟನ್ಬರಿ ಫೆಸ್ಟಿವಲ್ನಲ್ಲಿ ಪಿಪವರ್ ಪ್ರೋಜಕ್ಟ್ ಪರೀಕ್ಷೆ ಆರಂಭಿಸಲಾಗಿತ್ತು. ಅಂದು ಶೌಚಾಲಯದಲ್ಲಿ ವಿದ್ಯುತ್ ಉತ್ಪಾದಿಸಲು ಸಾಧ್ಯ ಎಂದು ವಿಜ್ಞಾನಿಗಳು ಹೇಳಿದ್ದರು.
ಇಂಗ್ಲೆಂಡಿನ ಸಂಶೋಧಕರ ತಂಡ ಮೈಕ್ರೋಬಿಯಲ್ ಫ್ಯೂಯಲ್ಸೆಲ್ ಉಪಯೋಗಿಸಿ ಮನುಷ್ಯ ವಿಸರ್ಜನೆಯಿಂದ ವಿದ್ಯುತ ಉತ್ಪಾದಿಸುವುದನ್ನು ಕಂಡು ಹಿಡಿದಿದ್ದಾರೆ. ಒಂದು ದಿನದ ಮನೆಯ ಬಳಕೆಗೆ ಹೀಗೆ ವಿದ್ಯುತ್ ಉತ್ಪಾದಿಸಬಹುದೆಂಬ ನಿರೀಕ್ಷೆ ವಿಜ್ಞಾನಿಗಳಲ್ಲಿದೆ. ಗ್ಲಾಸ್ಟನ್ಬರಿ ಫೆಸ್ಟಿವಲ್ನಲ್ಲಿ ಎರಡು ವರ್ಷಗಳ ಹಿಂದೆ ಆರಂಭವಾದ ಮೇಲೆ ಮೊಬೈಲ್ ಫೋನ್ಗಳನ್ನು ಚಾರ್ಜು ಮಾಡಲು ಬಲ್ಬ್ ಗಳು ,ರೊಬೊಟಿಕ್ಗಳ ಚಾರ್ಜ್ ಮಾಡಲು ಸಾಧ್ಯ ಎಂದು ಹೇಳಲಾಗಿದೆ. ಐದು ದಿನ ಶೌಚಾಲಯದಲ್ಲಿ ಜನರು ಮೂತ್ರ ವಿಸರ್ಜಿಸಿದರೆ 300 ವಾಟ್ ವಿದ್ಯುತ್ ಉತ್ಪಾದಿಸಲು ಸಾಧ್ಯವಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.












