ಬೆಂಗಳೂರು: ನಟ ಪುನೀತ್ ನಿಧನದ ಬಳಿಕ ಹೃದಯ ತಪಾಸಣೆಗೆ ಜಯದೇವ ಆಸ್ಪತ್ರೆಯಲ್ಲಿ ಜನಸಾಗರ!

0
821

ಸನ್ಮಾರ್ಗ ವಾರ್ತೆ

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರ ಹಠಾತ್ ನಿಧನದ ನಂತರ ಆತಂಕಕ್ಕೆ ಒಳಗಾಗಿರುವ ಜನರು ತಮ್ಮ ಹೃದಯವನ್ನು ಪರೀಕ್ಷಿಸಿಕೊಳ್ಳಲು ಬೆಂಗಳೂರಿನಾದ್ಯಂತ ಗುಂಪು ಗುಂಪಾಗಿ ಆಸ್ಪತ್ರೆಗಳಿಗೆ ತೆರಳಿರುವ ಮಾಹಿತಿ ಹೊರ ಬಂದಿದೆ. ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಇದೇ ಮೊದಲ ಬಾರಿಗೆ ಸಣ್ಣಪುಟ್ಟ ಸಮಸ್ಯೆ ಇರುವ ಹಲವಾರು ರೋಗಿಗಳು ತಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ವಿವಿಧ ಪರೀಕ್ಷೆಗಳು ಮತ್ತು ಸಿಟಿ ಆಂಜಿಯೋಗ್ರಾಮ್ ಗಳಿಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.

ಒಪಿಡಿ ರೋಗಿಗಳಾಗಿ ಕಾಣಿಸಿಕೊಂಡ ಜನರ ಸಂಖ್ಯೆಯಲ್ಲಿ ಶೇಕಡ 30 ರಷ್ಟು ಹೆಚ್ಚಳವಾಗಿದೆ. ಈ ಪೈಕಿ ಸುಮಾರು ಮೂರನೇ ಒಂದು ಭಾಗದಷ್ಟು ಜನರಿಗೆ ಯಾವುದೇ ಹೃದಯ ಸಂಬಂಧಿ ಸಮಸ್ಯೆಗಳಿಲ್ಲ. ಒಟ್ಟು ಆಸ್ಪತ್ರೆ ಗೆ ಆಗಮಿಸಿದವರಲ್ಲಿ ಶೇಕಡಾ 10ರಿಂದ 20ರಷ್ಟು ಮಂದಿ ಭಯಭೀತರಾಗಿದ್ದಾರೆ ಎಂದು ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞರಾದ ರವೀಂದ್ರನಾಥ್ ತಿಳಿಸಿದ್ದಾರೆ

ಆಸ್ಪತ್ರೆಗೆ ಭೇಟಿ ನೀಡಿದ ಅನೇಕ ರೋಗಿಗಳು ಸ್ಟಾರ್ ನಟನ ಸಾವಿನ ಸುದ್ದಿಯ ಭೀತಿಯಲ್ಲಿ ಮುಳುಗಿರುವುದು ಮತ್ತು ಇದರ ಪರಿಣಾಮವಾಗಿ ರಾತ್ರಿ ಮಲಗಲು ಸಾಧ್ಯವಾಗುತ್ತಿಲ್ಲ ಮತ್ತು ಎದೆ ನೋವಿನ ಅನುಭವ ಆಗುತ್ತಿರುವುದಾಗಿ ತಿಳಿಸಿದ್ದಾರೆ ಎಂದು ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.