ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಕೋತಿಯ ಮರಿಯೊಂದನ್ನು ಕಚ್ಚಿ ಕೊಂದ ನಾಯಿಗಳ ವಿರುದ್ಧ ಪ್ರತೀಕಾರಕ್ಕಿಳಿದ ಮಂಗಗಳು 250 ನಾಯಿ ಮರಿಗಳನ್ನು ಹತ್ಯೆ ನಡೆಸಿದ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿದೆ.
ನಾಯಿಯ ಮರಿಗಳನ್ನು ಹುಡುಕಿ ಹಿಡಿದು ತಂದು ಎತ್ತರದ ಕಟ್ಟಡದಿಂದ, ಮರದಿಂದ ಕೆಳಗೆ ಎಸೆಯುತ್ತಿದ್ದವು. ಪರಿಣಾಮವಾಗಿ ಒಂದು ತಿಂಗಳಲ್ಲಿ 250 ನಾಯಿ ಮರಿಗಳು ಮಂಗಗಳ ಪ್ರತೀಕಾರಕ್ಕೆ ಬಲಿಯಾಗಿವೆ.
ಮಜಲ್ ಗಾವ್, ಲಾವನ್ ಗ್ರಾಮಗಳಲ್ಲಿ ಮಂಗಗಳು ವ್ಯಾಪಕ ದಾಳಿ ನಡೆಸಿವೆ. ಎರಡು ಗ್ರಾಮಗಳಲ್ಲಿ ನಾಯಿ ಮರಿಗಳ ಸಂಖ್ಯೆ ಕ್ರಮಾತೀತವಾಗಿ ಕಡಿಮೆಯಾಗಿದ್ದು ಇದಕ್ಕೆ ಮಂಗಗಳ ಕಾರಣ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ನಾಯಿಗಳನ್ನು ಕಂಡಾಗ ಮಂಗಗಳು ಸುತ್ತಲು ನೆರೆಯುತ್ತವೆ. ಮತ್ತು ನಾಯಿ ಮರಿಗಳನ್ನು ಎತ್ತಿಕೊಂಡು ಹೋಗಿ ಎತ್ತರದ ಕಟ್ಟಡದಿಂದ ಕೆಳಗೆ ಎಸೆಯುವುದು ರೂಢಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ನಾಯಿಗಳನ್ನು ಎತ್ತಿಕೊಂಡು ಹೋಗುತ್ತಿರುವ ಮಂಗಳ ಚಿತ್ರವೂ ಹೊರಬಂದಿದೆ.












