ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಶಿಕ್ಷಣ ಸಂಸ್ಥೆಗಳಲ್ಲಿ ಡ್ರೆಸ್ ಕೋಡ್ ಪ್ರಧಾನ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು. ಹಿಜಾಬ್ ವಿವಾದದಲ್ಲಿ ಮೊದಲ ಬಾರಿಗೆ ಅವರಿಂದ ಹೇಳಿಕೆ ಬಂದಿದೆ. ಅಲ್ಲದೇ, ಕೋರ್ಟಿನ ತೀರ್ಪನ್ನು ಎಲ್ಲರೂ ಅಂಗೀಕರಿಸಬೇಕೆಂದು ಅಮಿತ್ ಶಾ ಆಗ್ರಹಿಸಿದರು.
ಎಲ್ಲ ಧರ್ಮಗಳೂ ಸ್ಕೂಲಿನಲ್ಲಿ ಡ್ರೆಸ್ ಕೋಡ್ ಪಾಲಿಸೇಬೇಕೆನ್ನುವುದು ನನ್ನ ವೈಯಕ್ತಿಕ ವಿಚಾರ. ದೇಶ ಸಂವಿಧಾನ ಪ್ರಕಾರ ಕಾರ್ಯವೆಸಗುವುದು. ಎಲ್ಲರೂ ಕೋರ್ಟು ತೀರ್ಪು ಅನುಸರಿಬೇಕೆಂದು ಅಮಿತ್ ಶಾ ಹೇಳಿದರು. ಹಿಜಾಬ್ ನಿಷೇಧ ವಿರುದ್ಧ ಅರ್ಜಿ ಕರ್ನಾಟಕ ಹೈಕೋರ್ಟಿನಲ್ಲಿ ವಿಚಾರಣೆಯಲ್ಲಿದೆ.
ಶಾಲೆಯವರು ಮಾಡಿದ ಡ್ರೆಸ್ ಕೋಡ್ ಎಲ್ಲ ವಿದ್ಯಾರ್ಥಿಗಳು ಪಾಲಿಸಬೇಕೆಂದು ಪ್ರಹ್ಲಾದ ಜೋಷಿ ಹೇಳಿದ್ದರು. ಕರ್ನಾಟಕದಲ್ಲಿ ಶಾಂತಿ ಕಾಪಾಡುವಂತೆಯೂ ಆಗ್ರಹಿಸಿದ್ದರು. ಇದೇ ವೇಳೆ ಹಿಜಾಬ್ ನಿಷೇಧ ಅರ್ಜಿ ಕರ್ನಾಟಕ ಹೈಕೋರ್ಟಿನ ವಿಶಾಲ ಪೀಠದಲ್ಲಿ ವಿಚಾರಣಾಧೀನವಾಗಿದೆ. ಕೇಸಿಗೆ ಸಂಬಂಧಿಸಿ ಬಹಳಷ್ಟು ಅರ್ಜಿಗಳು ಕೋರ್ಟಿನ ಮುಂದಿದೆ. ಈ ವಿಷಯದಲ್ಲಿ ಸಂವಿಧಾನದ ಸಿಂಧುತ್ವವನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಚೀಫ್ ಜಸ್ಟಿಸ್ ಹೇಳಿದ್ದಾರೆ.












