ಪೂಲ್ವಾಮ ಭಯೋತ್ಪಾದನಾ ದಾಳಿ: ಕೇಂದ್ರ ಗೃಹ ಸಚಿವರ ನೇತೃತ್ವದಲ್ಲಿ ದಿಲ್ಲಿಯಲ್ಲಿ ಸರ್ವ ಪಕ್ಷ ಸಭೆ ಆರಂಭ- 12 ಶಂಕಿತರ ಬಂಧನ

0
1324

ಹೊಸದಿಲ್ಲಿ: ಪುಲ್ವಾಮ ಭಯೋತ್ಪಾದನಾ ದಾಳಿಯ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ಸರ್ವಪಕ್ಷಗಳ ಸಭೆ ಆರಂಭವಾಗಿದೆ. ಭಯೋತ್ಪಾದನೆಯ ಕುರಿತ ಚರ್ಚೆಗಳಿಗಾಗಿ ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್ ಸಭೆ ಕರೆದಿದ್ದರು.

ಪುಲ್ವಾಮ ಭಯೋತ್ಪಾದನಾ ದಾಳಿಯ ಹಿನ್ನೆಲೆಯಲ್ಲಿ ಎಲ್ಲ ರಾಷ್ಟ್ರೀಯ-ಪ್ರಾದೇಶಿಕ ರಾಜಕೀಯ ಪಾರ್ಟಿಗಳ ಸಭೆ ಕರೆಯಬೇಕೆಂದು ಪ್ರತಿಪಕ್ಷಗಳುಆಗ್ರಹಿಸಿವೆ. ಗೃಹ ಸಚಿವ ರಾಜ್‍ನಾಥ್ ಸಿಂಗ್ ಕರೆದ ಸರ್ವಪಕ್ಷ ಸಭೆಯಲ್ಲಿ ಪ್ರತಿಪಕ್ಷಗಳು ತಮ್ಮ ಈ ಬೇಡಿಕೆಯನ್ನು ಮುಂದಿರಿಸಿವೆ. ಪ್ರಧಾನಿಯ ನೇತೃತ್ವದಲ್ಲಿ ಈ ಸಭೆಯ ನಡೆಯಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ. ಈ ನಡುವೆ ದಾಳಿಯಲ್ಲಿ ಶಾಮಿಲಾಗಿದ್ದಾರೆ ಎಂಬ ಶಂಕೆಯಾಧಾರದಲ್ಲಿ ಹನ್ನೆರಡು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.