ಸನ್ಮಾರ್ಗ ವಾರ್ತೆ
ಜೋಧ್ಪುರ: ವ್ಯಕ್ತಿಯೊಬ್ಬ ತನ್ನ ವೃದ್ಧ ತಂದೆಗೆ ಕೋಲಿನಿಂದ ಕ್ರೂರವಾಗಿ ಥಳಿಸುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ರಾಜಸ್ಥಾನದ ಜೋಧ್ಪುರದ ರಸ್ತೆಯಲ್ಲಿ ಈ ಘಟನೆ ನಡೆದಿದೆ.
ಸುದ್ದಿ ಸಂಸ್ಥೆ ಎಎನ್ಐ ಹಂಚಿಕೊಂಡಿರುವ ಸಿಸಿಟಿವಿ ಫೂಟೇಜ್ನಲ್ಲಿ, ತಂದೆ ಮತ್ತು ಮಗ ಯಾವುದೋ ವಿಷಯದ ಬಗ್ಗೆ ಜಗಳವಾಡುತ್ತಿರುವುದನ್ನು ನೋಡಬಹುದು. ಇದ್ದಕ್ಕಿದ್ದಂತೆ ಮಗನು ಬೀದಿಯಲ್ಲಿ ಬಿದ್ದಿದ್ದ ಕೋಲನ್ನು ತೆಗೆದುಕೊಂಡು ಕ್ರೂರವಾಗಿ ತಂದೆಗೆ ಹೊಡೆಯಲು ಪ್ರಾರಂಭಿಸುತ್ತಾನೆ. ವೀಡಿಯೊದಲ್ಲಿ ಗೋಚರಿಸದ ಕೆಲವು ನೆರೆಹೊರೆಯವರು ದೂರದಿಂದಲೇ ಅವರನ್ನು ತಡೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಆದಾಗ್ಯೂ, ಅವನು ತನ್ನ ತಂದೆಯ ಮೇಲೆ ಹಲ್ಲೆ ಮಾಡುವುದನ್ನು ಮುಂದುವರಿಯುತ್ತಾನೆ. ವಾಗ್ವಾದ ಮುಂದುವರಿಯುತ್ತಿದಂತೆ ತಂದೆಗೆ ಕಪಾಳಮೋಕ್ಷ ಮಾಡುತ್ತಾ ಥಳಿಸಲು ಪ್ರಾರಂಭಿಸುತ್ತಾನೆ.
ವಿಡಿಯೋದಲ್ಲಿರುವ ವ್ಯಕ್ತಿ ತನ್ನ ತಂದೆಯ ಮೇಲೆ ಹಲ್ಲೆ ನಡೆಸಿರುವುದು ಇದೇ ಮೊದಲಲ್ಲ ಎಂದು ಘಟನೆ ನಡೆದ ಜೋಧ್ಪುರದ ರತನಾಡ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಘಟನೆಯ ಒಂದು ದಿನದ ಮೊದಲು ಮಗ ತನ್ನ ತಂದೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆರೋಪಿಯನ್ನು ಸಿಆರ್ಪಿಸಿ (ಕ್ರಿಮಿನಲ್ ಪ್ರೊಸೀಜರ್ ಕೋಡ್) 151ರ ಅಡಿಯಲ್ಲಿ ಬಂಧಿಸಲಾಗಿದೆ.
#WATCH | A video of a son beating his father in Rajasthan's Jodhpur went viral
The son often quarrels with the father regarding matters of the household. He misbehaved with his father yesterday also. He has been arrested under CrPC 151: SHO Ratnada PS
(CCTV Visuals) pic.twitter.com/3RScDVlOi4
— ANI MP/CG/Rajasthan (@ANI_MP_CG_RJ) September 19, 2022