ಫೆಲೆಸ್ತೀನ್‌ಗೆ 60 ದಶಲಕ್ಷ ಡಾಲರ್ ಮೊತ್ತವನ್ನು ನೀಡಿದ ಸೌದಿಅರೇಬಿಯಾ

0
1586

ಸೌದಿ ಫಂಡ್ ಫಾರ್ ಡೆವಲಪ್ಮೆಂಟ್ (ಎಸ್ಎಫ್ಡಿ) ಫೆಲಸ್ತೀನಿ ಹಣಕಾಸು ಸಚಿವಾಲಯದ ಖಾತೆಗೆ $60 ದಶಲಕ್ಷವನ್ನು ವರ್ಗಾಯಿಸಿದೆ. ಈಜಿಪ್ಟ್ ನಲ್ಲಿರುವ ಸೌದಿ ರಾಯಭಾರಿ ಒಸಾಮಾ ಬಿನ್ ಅಹ್ಮದ್ ನಖ್ಲಿ ಅವರು ಇದನ್ನು ಘೋಷಿಸಿದ್ದಾರೆ.

ಪಾವತಿಸಿದ ಮೊತ್ತವು ಫೆಲಸ್ತೀನಿ ಅಥಾರಿಟಿ (ಪಿಎ)ಯ ನವೆಂಬರ್ ಮತ್ತು ಡಿಸೆಂಬರ್ 2018 ಬಜೆಟ್ ಮತ್ತು 2019 ರ ಜನವರಿ ಬಜೆಟ್ ಗೆ ಬೆಂಬಲ ನೀಡುವ ಉದ್ದೇಶವನ್ನು ಹೊಂದಿದೆ ಎಂದು ಅವರು ಹೇಳಿದರು.

ಸೌದಿ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಜೀಝ್ ಮತ್ತು ರಾಜಕುಮಾರ ಮುಹಮದ್ ಬಿನ್ ಸಲ್ಮಾನ್‌ರೊಂದಿಗೆ ಫೆಲಸ್ತೀನಿ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸಲು ಫೆಲಸ್ತೀನಿ ಅಧ್ಯಕ್ಷ ಮಹಮ್ಮದ್ ಅಬ್ಬಾಸ್‌ರು ಸೌದಿ ರಾಜಧಾನಿ ರಿಯಾದ್‌ಗೆ ಎರಡು ದಿನಗಳ ಅಧಿಕೃತ ಭೇಟಿ ನೀಡಿದ್ದರು.