ಅಮರಾವತಿ: ಪ್ರಧಾನಿ ನರೇಂದ್ರ ಮೋದಿಗಿಂತ ಉತ್ತಮ ನಟ ಬೇರೆ ಯಾರೂ ಇಲ್ಲ ಎಂದು ಪ್ರಧಾನಿ ವಿರುದ್ಧ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯಿಡು ಹೇಳಿದ್ದಾರೆ. ಚುನಾವಣೆ ಹತ್ತಿರ ಬಂದದ್ದರಿಂದ ಮೋದಿ ಕಾರ್ಮಿಕರ ಕಾಲು ತೊಳೆಯುತ್ತಿದ್ದಾರೆ ಎಂದು ಅವರು ಆರೋಪಿಸಿದರು.
“ಚುನಾವಣೆ ಹತ್ತಿರವಾಗಿದ್ದರಿಂದ ನರೇಂದ್ರ ಮೋದಿ ಕಾರ್ಮಿಕರ ಕಾಲುತೊಳೆದಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಈ ಕಾರ್ಮಿಕರು ತಮ್ಮ ಕೆಲಸವನ್ನು ಮಾಡಿದ್ದಾರೆ. ಆದರೆ, ಈ ಸಮಯದಲ್ಲಿ ಒಮ್ಮೆಯೂ ಅವರ ಕಾಲು ತೊಳೆದಿಲ್ಲ. ಈಗ ಚುನಾವಣೆಯನ್ನು ಮನಸ್ಸಿನಲ್ಲಿಟ್ಟು ಕಾಲು ತೊಳೆದಿದ್ದಾರೆ. ಒಬ್ಬರು ನಮಸ್ಕಾರ ಎಂದರೂ ಮೋದಿ ಮೌನವಾಗಿರುತ್ತಾರೆ. ಅಡ್ವಾಣಿಯವರ ಶುಭಹಾರೈಕೆಯನ್ನೂ ಲೆಕ್ಕಿಸುವುದಿಲ್ಲ. ಗುರುವನ್ನೇ ವಂಚಿಸುತ್ತಾರೆ. ಮೋದಿಗಿಂತ ಉತ್ತಮ ನಟ ಬೇರೊಬ್ಬರಿಲ್ಲ” ಎಂದು ಚಂದ್ರಬಾಬು ನಾಯಿಡು ಹೇಳಿದರು.
ಉತ್ತರಪ್ರದೇಶದ ಕುಡಿಯುವ ನೀರು, ಶುಚೀಕರಣ ಸಚಿವಾಲಯ ನಡೆಸಿದ ಸ್ವಚ್ಛ್ ಕುಂಭ್ ಸ್ವಚ್ಛ್ ಆಭಾರ್ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿಮೋದಿ ಶುಚೀಕರಣ ಕಾರ್ಮಿಕರ ಕಾಲನ್ನು ತೊಳೆದಿದ್ದಾರೆ. ಕುಂಭ ಮೇಳದಲ್ಲಿ ಭಾಗವಹಿಸಲು ಪ್ರಧಾನಿ ಪ್ರಯೋಗರಾಜ್ಗೆ ಬಂದಿದ್ದರು. ಅವರು ಗಂಗಾನದಿಯಲ್ಲಿ ಸ್ನಾನವನ್ನೂ ಮಾಡಿದ್ದರು.












