ಸನ್ಮಾರ್ಗ ವಾರ್ತೆ
ಕೊಳ್ನಾಡು: ಕೊಳ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ತಾಳಿತ್ತನೂಜಿ ನಾರ್ಶ ವಾರ್ಡಿನ ದೇವಸ್ಯ ಜಂಕ್ಷನ್ ಎಂಬಲ್ಲಿ ದಿ| ಮಹಾಲಿಂಗ ಶೆಟ್ಟಿ ದೇವಸ್ಯ ಹಾಗೂ ಗೌರಮ್ಮ ದಾಮೋದರ ಚೌಟ ಸ್ಮರಣಾರ್ಥ ಅವರ ಕುಟುಂಬದವರು ಸಾರ್ವಜನಿಕ ಅನೂಕೂಲಕ್ಕಾಗಿ ದೇವಸ್ಯ ಗೌರಮ್ಮ ದಾಮೋದರ ಚೌಟರ ಮಕ್ಕಳು ಕೊಡುಗೆಯಾಗಿ ನೀಡಿದ ನೂತನ ಪ್ರಯಾಣಿಕರ ಬಸ್ಸು ತಂಗುದಾಣ ಉದ್ಘಾಟನೆಗೊಂಡಿತು.
ಗೌರಮ್ಮ-ದಾಮೋದರ ಚೌಟ ಅವರ ಕಿರಿಯ ಮಗ ಚಿದಾನಂದ ಚೌಟರ ಅವರ ಉಸ್ತುವಾರಿಯೊಂದಿಗೆ ಬಸ್ಸು ತಂಗುದಾಣದ ಸಂಪೂರ್ಣ ವೆಚ್ಚ ಭರಿಸಿ ಸುಸಜ್ಜಿತ ತಂಗುದಾಣ ನಿರ್ಮಿಸಿ ಸಾರ್ವಜನಿಕರಿಗೆ ಬಿಟ್ಟುಕೊಡಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೊಳ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಮಾತಾಡಿ, ದೇವಸ್ಯ ಮಹಾಲಿಂಗ ಶೆಟ್ಟರ ಕುಟುಂಬದ ಉದಾರತೆಯನ್ನು ಮೆಲುಕು ಹಾಕಿದರು. ಸುಂದರ ಸುಸಜ್ಜಿತ ತಂಗುದಾಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಾರ್ವಜನಿಕರು,ಶಾಲಾ ಮಕ್ಕಳು ಇದನ್ನು ದುರುಪಯೋಗಿಸದೆ ಸ್ವಚ್ಚತೆ ಪಾಲಿಸಬೇಕೆಂದು ಸಲಹೆ ನೀಡಿದರು. ಮತ್ತು ಕುಟುಂದವರನ್ನು ಅಭಿನಂದಿಸಿದರು. ಸುಭಾಶ್ಚಂದ್ರ ಶೆಟ್ಟಿ,ದೇವಸ್ಯ ಕುಲ್ಯಾರು ಭಾಗದಲ್ಲಿ ಕಾಂಕ್ರೀಟ್ ರಸ್ತೆ,ಕುಲ್ಯಾರು ಅಕ್ಕರೆ ಸಂಪರ್ಕಿಸುವ ಸೇತುವೆ ನಿರ್ಮಿಸಲು ಸಹಕರಿಸಿದ ನಾರಯಣ ಶೆಟ್ಟಿ ಕುಲ್ಯಾರು, ತಾಳಿತ್ತನೂಜಿ ದೇವಸ್ಯವರೆಗಿನ ಬಸ್ಸು ವ್ಯವಸ್ಥೆ ಕಲ್ಪಿಸಲು ಸಹಕರಿಸಿದ ಹಸೈನಾರ್ ತಾಳಿತ್ತನೂಜಿ ಇವರನ್ನು ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ನಾರಯಣ ಶೆಟ್ಟಿ ಕುಲ್ಯಾರು, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸಂಕಪ್ಪ ಗೌಡ ತಾಳಿತ್ತನೂಜಿ, ಸೋಮಶೇಖರ್ ಗೌಡ ತಾಳಿತ್ತನೂಜಿ, ವನಬಿಂದು ದೇವಸ್ಥಾನ ಕಾರ್ಯದರ್ಶಿ ಈಶ್ವರ ಗೌಡ ತಾಳಿತ್ತನೂಜಿ, ಜಯನಾಥ ಮೂಲ್ಯ ತಾಳಿತ್ತನೂಜಿ ಕೋಡಿ, ಮೊಯಿದು ಕುಂಞಿ ತಾಳಿತ್ತನೂಜಿ, ಅಬ್ದುಲ್ ರಹಿಮಾನ್ ಕುಲ್ಯಾರು, ಊರಿನ ನಾಗರೀಕರು ಹಾಗೂ ದಿ.ಮಹಾಲಿಂಗ ಶೆಟ್ಟಿ, ಕುಟುಂಬಸ್ಥರು ಹಾಜರಿದ್ದರು. ಹಸೈನಾರ್ ತಾಳಿತ್ತನೂಜಿ ಸ್ವಾಗತಿಸಿ, ಸೋಮಶೇಖರ್ ಗೌಡ ವಂದಿಸಿದರು.












