11 ಸಾವಿರ ಕಾರ್ಮಿಕರನ್ನು ಕೈಬಿಡುತ್ತಿರುವ ವೋಡಾಫೋನ್

0
334

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,: ವೋಡಾಫೋನ್ ತನ್ನ ಕೆಲಸಗಾರರನ್ನು ಕೈಬಿಡಲು ಸಿದ್ಧವಾಗಿದೆ. ಬ್ರಿಟಿಷ್ ಟೆಲಿಕಾಂ ಆಗಿರುವ ವಡಾಫೋನ್ ಮುಂದಿನ ವರ್ಷದೊಳಗೆ 11,000 ಕೆಲಸಗಾರರನ್ನು ಕೆಲಸದಿಂದ ಕೈಬಿಡುತ್ತಿರುವುದಾಗಿ ತಿಳಿಸಿದೆ. ಹೊಸ ಆರ್ಥಿಕ ವರ್ಷದಲ್ಲಿ ಆದಾಯದಲ್ಲಿ ಹೇಳಿಕೊಳ್ಳುವಂತಹ ಹೆಚ್ಚಳ ಆಗದಿರುವುದರಿಂದ ಖರ್ಚು ಕಮ್ಮಿ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಹೊಸ ಕ್ರಮಕ್ಕೆ ವೋಡಾಫೋನ್ ಮುಂದಾಗಲೇ ಬೇಕಿದೆ ಎಂದು ಚೀಫ್ ಎಕ್ಸಿಕ್ಯೂಟಿವ್ ಮಾರ್ಗರೆಟ್ ಡೆಲ್ಲ ವಾಲೆ ಹೇಳಿದ್ದಾರೆ.

ಕಳೆದ ವರ್ಷ ವೋಡಾಫೋನ್‍ನಲ್ಲಿ 104,000 ಕೆಲಸಗಾರರಿದ್ದರು. ಇವರಲ್ಲಿ 11000 ಜನರನ್ನು ವೋಡಾ ಫೋನ್ ಕೆಲಸದಿಂದ ತೆಗೆದು ಹಾಕಲಿದೆ. ಈ ಮೂಲಕ ವೋಡಾಫೋನ್‍ನಿನ ಜಾಗತಿಕ ಕಾರ್ಮಿಕರಲ್ಲಿ ಶೇ. 10ರಷ್ಟು ಕೆಲಸಗಾರರನ್ನು ಕಂಪೆನಿ ಕಡಿಮೆ ಮಾಡಿದಂತಾಗುತ್ತದೆ.