ಹಿಜಾಬ್ ನಿಷೇಧ ಹಿಂತೆಗೆತ: ಸಚಿವ ಸಂಪುಟದಲ್ಲಿ ತೀರ್ಮಾನ- ಯು.ಟಿ ಖಾದರ್

0
1055

ಸನ್ಮಾರ್ಗ ವಾರ್ತೆ

ಹಿಜಾಬ್ ನಿಷೇಧ ಸಹಿತ ಬಿಜೆಪಿ ಸರಕಾರ ಜಾರಿಗೊಳಿಸಿರುವ ಜನವಿರೋಧಿ ನೀತಿಗಳನ್ನು ಹಿಂಪಡೆಯುವ ಕುರಿತಂತೆ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಸಕ ಯು.ಟಿ ಖಾದರ್ ತಿಳಿಸಿದ್ದಾರೆ. ಮೀಡಿಯಾ ವನ್ ಟಿವಿ ಚಾನೆಲ್ ನೊಂದಿಗೆ ಮಾತಾಡುತ್ತಾ ಅವರು ಈ ಭರವಸೆಯನ್ನು ನೀಡಿದ್ದಾರೆ.

ಸಿದ್ದರಾಮಯ್ಯ ಸರಕಾರ ಅಧಿಕಾರ ವಹಿಸಿಕೊಂಡ ಬಳಿಕ ಜನ ವಿರೋಧಿ ನೀತಿಗಳ ಪರಾಮರ್ಶೆ ನಡೆಸಲಾಗುವುದು. ಸಿದ್ದರಾಮಯ್ಯ ಸರ್ಕಾರ ಜನರಿಗಾಗಿಯೇ ಇರಲಿದೆ ಮತ್ತು ಅವರ ಕಷ್ಟ ಸುಖಗಳಿಗಾಗಿ ಸ್ಪಂದಿಸಲಿದೆ ಎಂದು ಯು.ಟಿ ಖಾದರ್ ಹೇಳಿದ್ದಾರೆ.

ರಾಜ್ಯ ಸಚಿವ ಸಂಪುಟದ ಬಗ್ಗೆ ಇನ್ನಷ್ಟೇ ವಿವರಗಳು ಬರಬೇಕಾಗಿದ್ದು ಯು.ಟಿ ಖಾದರ್ ಅವರಿಗೆ ಪ್ರಭಾವಿ ಸಚಿವ ಸ್ಥಾನ ಸಿಗಲಿದೆ ಎಂದು ಹೇಳಲಾಗುತ್ತಿದೆ. ಸತತ ಐದನೇ ಬಾರಿ ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ.